ನಮ್ಮ ಕರ್ನಾಟಕ ಸೇನೆಗೆ ನೇಮಕ

Namma Karnataka Sene
Published on

ಬೀದರ್: ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ತಿಳಿಸಿದ್ದಾರೆ.
ಪದಾಧಿಕಾರಿಗಳು: ರಮೇಶ ಚಿದ್ರಿ (ಗೌರವಾಧ್ಯಕ್ಷ), ರಾಜಕುಮಾರ ಪಾಟೀಲ, ಪ್ರದೀಪ್ ಪಾಟೀಲ, ಅಜೀಮ್ ಪಟೇಲ್ (ಉಪಾಧ್ಯಕ್ಷರು), ಸಂಜು ಯಾದವ್ (ಪ್ರಧಾನ ಕಾರ್ಯದರ್ಶಿ), ಗಿರೀಶ್ ಬಿರಾದಾರ, ರಾಮಶೆಟ್ಟಿ ಹುಣಜೆ, ಜಿತೇಂದ್ರ ರಾಠೋಡ್, ಸಂತೋಷ್ ಬಿರಾದಾರ, ಅನಿಲ್ ರಾಜಗೀರಾ (ಸಂಘಟನಾ ಕಾರ್ಯದರ್ಶಿ), ದತ್ತು ಗಿರಿ (ಕಾರ್ಯದರ್ಶಿ), ಸುಧಾಕರ ರಾಠೋಡ್ (ಪ್ರಧಾನ ಸಂಚಾಲಕ), ಸಂತೋಷ್ ನಾಯಕ್ (ಸಂಚಾಲಕ), ದಿಲೀಪ್ ದೊಡ್ಡಮನಿ (ಸಲಹೆಗಾರ), ಲೋಕೇಶ ಪಾಟೀಲ (ಸಾಮಾಜಿಕ ಜಾಲತಾಣ ಮುಖ್ಯಸ್ಥ), ಸಂತೋಷ್ ಪಾಟೀಲ (ಬೀದರ್ ನಗರ ಘಟಕದ ಅಧ್ಯಕ್ಷ), ಹರ್ಷ ಬಿರಾದಾರ ಮತ್ತು ಶ್ರೀನಿವಾಸ್ ಘಂಟೆ (ಉಪಾಧ್ಯಕ್ಷರು).
ನೇಮಕಾತಿ ಪತ್ರ ವಿತರಣೆ: ನೂತನ ಪದಾಧಿಕಾರಿಗಳಿಗೆ ನಗರದ ಪ್ರವಾಸಿ ಮಂದಿರದಲ್ಲಿ ನೇಮಕಾತಿ ಪತ್ರ ವಿತರಿಸಿ, ಸನ್ಮಾನಿಸಲಾಯಿತು.
ನೂತನ ಪದಾಧಿಕಾರಿಗಳು ಕನ್ನಡ ನೆಲ, ಜಲ, ಸಂಸ್ಕøತಿ, ಭಾಷೆ ಬೆಳವಣಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಗಣೇಶ ಪಾಟೀಲ ಸಲಹೆ ಮಾಡಿದರು.
ಪ್ರಮುಖರಾದ ಬಸವರಾಜ ಕಾರಬಾರಿ, ಕಾಶೀನಾಥ ಚಳಕಾಪುರೆ, ಶಿರೇಶ್ ರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net