

ಬೀದರ್: ಶ್ರಾವಣ ಮಾಸದ ನಿಮಿತ್ತ ಬಸವ ಸೇವಾ ಪ್ರತಿಷ್ಠಾನ ವತಿಯಿಂದ ನಗರದ ಶರಣ ಉದ್ಯಾನದಲ್ಲಿ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಅವರು ಪ್ರಭುಲಿಂಗ ಲೀಲೆ ವಿಷಯದ ಮೇಲೆ ಪ್ರವಚನ ನೀಡಲಿದ್ದಾರೆ.
ಸೆ.2ರವರೆಗೆ ನಿತ್ಯ ಸಂಜೆ 6ಕ್ಕೆ ಪ್ರವಚನ ಇರಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರತಿಷ್ಠಾನದ ಆಡಳಿತಾಧಿಕಾರಿ ಶಂಕ್ರೆಪ್ಪ ಹೊನ್ನಾ ಕೋರಿದ್ದಾರೆ.