ದೇಶಕ್ಕೆ ಮಾಧ್ಯಮ ಕೊಡುಗೆ ಅಪಾರ

brahma kumaris centre
Published on

ಬೀದರ್: ದೇಶದ ಪ್ರಜಾಪ್ರಭುತ್ವ ಬಲವರ್ಧನೆಯಲ್ಲಿ ಮಾಧ್ಯಮ ಕೊಡುಗೆ ಅಪಾರ ಎಂದು ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಹೇಳಿದರು.
ಜನವಾಡ ರಸ್ತೆಯ ಬ್ರಹ್ಮಕುಮಾರಿ ಕೇಂದ್ರ ಪಾವನಧಾಮದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿ, ಮಾಧ್ಯಮದಲ್ಲೂ ಇದೀಗ ಗುಂಪುಗಾರಿಕೆ, ಒಂದು ಪಕ್ಷದ ಪರ ಸುದ್ದಿ ಪ್ರಕಟಿಸುವುದು ಹೆಚ್ಚಾಗುತ್ತಿದೆ. ಇದು ಪತ್ರಿಕಾ ಧರ್ಮದ ವಿರುದ್ಧವಾದದ್ದು. ಸಮಾಜ ಎಂದಿಗೂ ನಮ್ಮನ್ನು ಗೌರವದಿಂದ ಕಾಣುತ್ತದೆ. ಅದನ್ನು ಉಳಿಸಿಕೊಂಡು ವೃತ್ತಿ ಧರ್ಮ ಕಾಪಾಡುವ ಅಗತ್ಯವಿದೆ ಎಂದರು.
ಪಾವನಧಾಮದ ಸಂಚಾಲಕಿ ಬಿಕೆ ಪ್ರತಿಮಾ ಬಹೆನ್ ಜಿ ಮಾತನಾಡಿ, ಪತ್ರಕರ್ತನ ಒಂದು ಬರವಣಿಗೆ ಸಮಾಜವನ್ನು ಜೋಡಿಸುವ, ಸುಧಾರಿಸುವ ಕೆಲಸ ಮಾಡುತ್ತದೆ. ಅದೇ ಬರವಣಿಗೆ ತಪ್ಪಿನಿಂದ ಒಡೆಯಲೂಬಹುದು. ಹೀಗಾಗಿ ಸಕಾರಾತ್ಮಕ ವಿಚಾರಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕೇಂದ್ರದ ಹಿರಿಯ ರಾಜಯೋಗ ಶಿಕ್ಷಕಿ ಬಿಕೆ ಗುರುದೇವಿ ಮಾತನಾಡಿದರು. ಶಿವಕುಮಾರ ಸ್ವಾಮಿ, ವೆಂಕಟೇಶ ಮೋರಖಂಡಿ, ಕರಣಕುಮಾರ ಚಂದನ್, ರಾಜೇಶ ಮುಗಟೆ, ಸಂಜುಕುಮಾರ ಬುಕ್ಕಾ, ನಾಗಶೆಟ್ಟಿ ಧರಂಪುರ, ಬಸವರಾಜ ಕಾಮಶೆಟ್ಟಿ, ಎಂ.ಮಸೂದ್, ದೀಪಕ ಮನ್ನಳ್ಳಿ, ವಿಜಯಕುಮಾರ ಪಾಟೀಲ್ ಚಾಂಬೋಳ, ಸುನೀಲ ಹೊನ್ನಳ್ಳಿ ಇತರರಿದ್ದರು. ಪತ್ರಕರ್ತರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net