ಆರೋಗ್ಯಪೂರ್ಣ ಸಮಾಜಕ್ಕೆ ಬಸವ ತತ್ವ ಪ್ರಚಾರ ಅಗತ್ಯ

Pravachan Karpatra - Copy
Published on

ಬೀದರ್: ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣರ ತತ್ವಗಳ ಪ್ರಚಾರ ಅಗತ್ಯವಾಗಿದೆ ಎಂದು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಗೀತಾ ಈಶ್ವರ ಖಂಡ್ರೆ ಹೇಳಿದರು.
ನಗರದಲ್ಲಿ ಲಿಂಗಾಯತ ಮಹಾಮಠದ ವತಿಯಿಂದ ಹಮ್ಮಿಕೊಳ್ಳಲಾದ 770 ಬಸವ ತತ್ವ ಪ್ರವಚನಗಳ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಸಾಂಸ್ಕøತಿಕ ನಾಯಕರನ್ನಾಗಿ ಘೋಷಣೆ ಮಾಡಿದೆ. ಇದೇ ವೇಳೆ ಪ್ರಭುದೇವ ಸ್ವಾಮೀಜಿ ಅವರು ಪ್ರವಚನ ಅಭಿಯಾನ ಹಮ್ಮಿಕೊಂಡಿರುವುದು ಅತ್ಯಂತ ಸೂಕ್ತವಾಗಿದೆ ಎಂದು ತಿಳಿಸಿದರು.
ಅಭಿಯಾನದ ಅಂಗವಾಗಿ ಪ್ರಭುದೇವ ಸ್ವಾಮೀಜಿ ಗ್ರಾಮ, ಹೋಬಳಿ, ಪಟ್ಟಣ, ನಗರ ಸೇರಿದಂತೆ 770 ಕಡೆಗಳಲ್ಲಿ ಪ್ರವಚನ ನೀಡಲಿದ್ದಾರೆ ಎಂದು ಲಿಂಗಾಯತ ಮಹಾಮಠದ ಪ್ರಮುಖರಾದ ರಮೇಶ ಮಠಪತಿ ಮಾಹಿತಿ ನೀಡಿದರು.
ಮೊದಲ ಪ್ರವಚನ ಗೋರ್ಟಾ(ಬಿ), ಎರಡನೇ ಪ್ರವಚನ ನೆರೆಯ ತೆಲಂಗಾಣದ ಜಹೀರಾಬಾದ್‍ನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಅಕ್ಕ ಅನ್ನಪೂರ್ಣ ತಾಯಿ ಅವರ ಆಶಯದಂತೆ ವಚನಗಳನ್ನು ಓದಲು ಪ್ರೇರಣೆ ನೀಡುವುದು, ಶರಣರ ಮಾನವೀಯ ಮೌಲ್ಯಗಳನ್ನು ಜನಮನದಲ್ಲಿ ಮೂಡಿಸುವುದು, ಭಕ್ತಿ, ಶ್ರದ್ಧೆಗಳನ್ನು ಅರಳಿಸುವುದು, ಕಾಯಕ, ದಾಸೋಹದ ಅರಿವು ನೀಡುವುದು, ‘ವ್ಯಸನ ಮುಕ್ತಿಗಾಗಿ ಅಕ್ಕನವರ ಜೋಳಿಗೆ ಸಂಚಾರ’ ಮೊದಲಾದವು ಅಭಿಯಾನದ ಭಾಗವಾಗಲಿವೆ ಎಂದು ಹೇಳಿದರು.
ಪ್ರಮುಖರಾದ ಜಯರಾಜ ಖಂಡ್ರೆ, ಡಾ. ಶಿವಕುಮಾರ ಶೆಟಕಾರ್, ಡಾ. ರಾಜಶೇಖರ ಸೇಡಂಕರ್, ಹಾವಶೆಟ್ಟಿ ಪಾಟೀಲ, ಕೃಪಾಸಿಂಧು ಪಾಟೀಲ, ಸೂರ್ಯಕಾಂತ ರಾಮಶೆಟ್ಟಿ, ಕಾಮಶೆಟ್ಟಿ ಚಿಕ್ಕಬಸೆ, ಸೋಮಶೇಖರ ಬಿ. ಪಾಟೀಲ, ಕವಿತಾ ಪ್ರಭಾ, ಡಾ. ಜಯಶ್ರೀ ರತಿಕಾಂತ ಸ್ವಾಮಿ, ಅನುರಾಧ ತಟಪಟ್ಟಿ, ಉಮಾ ಮಣಗೆ, ಡಾ. ಶಾಂತಲಾ ಕೌಜಲಗಿ, ಶಾಂತಾ ಖಂಡ್ರೆ ಮತ್ತಿತರರು ಇದ್ದರು.
ಶಿವಕುಮಾರ ಪಾಖಾಲ್ ಸ್ವಾಗತಿಸಿದರು. ಪ್ರಭು ತಟಪಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net