ರೋಟರಿ ಕ್ಲಬ್‍ನಿಂದ ಸಸಿ ವಿತರಣೆ

Rotary Club Tree Distribution
Published on

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ನಗರದ ರಾಂಪುರೆ ಕಾಲೊನಿಯಲ್ಲಿ ಈಚೆಗೆ ಸಾರ್ವಜನಿಕರಿಗೆ 80 ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಕಾಲೊನಿಯ ವಿವಿಧೆಡೆ ಸಸಿಗಳನ್ನು ಸಹ ನೆಡಲಾಯಿತು. ‘ಒಂದು ಸಸಿ ತಾಯಿಯ ಹೆಸರಲ್ಲಿ ನೆಟ್ಟು ಬೆಳೆಸಿ' ಅಭಿಯಾನ ಅಂಗವಾಗಿ ಸಾರ್ವಜನಿಕರಿಗೆ ವಿವಿಧ ಬಗೆಯ ಸಸಿಗಳನ್ನು ವಿತರಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಶಿವಕುಮಾರ ಪಾಖಾಲ್ ತಿಳಿಸಿದರು.
ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಕ್ಲಬ್ ಕಾರ್ಯದರ್ಶಿ ಪ್ರಭು ತಟ್ಟಪಟ್ಟಿ, ಸದಸ್ಯರಾದ ನಿತಿನ್ ಕರ್ಪೂರ, ರಾಹುಲ್ ಅಟ್ಟಲ್, ಡಾ. ಕಪಿಲ್ ಪಾಟೀಲ, ಡಾ. ಲೋಕೇಶ ಹಿರೇಮಠ, ಸತೀಶ್ ಸ್ವಾಮಿ, ಆರ್.ಎಫ್.ಒ. ಪ್ರೇಮಶೇಖರ್, ಜೈ ಹನುಮಾನ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ರಮೇಶ ಇಟಗಿಕರ್, ಕಾರ್ಯದರ್ಶಿ ಬಾಬುರಾವ್ ಗೊಂಡ, ಖಜಾಂಚಿ ಆರ್.ಎಸ್. ಬಿರಾದಾರ, ಸದಸ್ಯರಾದ ಲಕ್ಷ್ಮಿಕಾಂತ ಜೋಳಗಿಕರ್, ಆನಂದ ಕುಲಕರ್ಣಿ, ಕೀರ್ತಿರಾಜ ಪೋಸ್ತೆ ಇದ್ದರು.
ಯೋಧರಿಗೆ ಸನ್ಮಾನ: ಕಾರ್ಗಿಲ್ ವಿಜಯೋತ್ಸವ ದಿನದ ಅಂಗವಾಗಿ ಕ್ಲಬ್‍ನಿಂದ ಐ.ಎಂ.ಎ. ಹಾಲ್‍ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುದ್ಧದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಸೈನಿಕರಾದ ದುಬಲಗುಂಡಿಯ ಮಚ್ಚೇಂದ್ರನಾಥ ಡಾಯಿಜೋಡೆ ಹಾಗೂ ಅಮೂಲ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಕ್ಲಬ್ ಅಧ್ಯಕ್ಷ ಶಿವಕುಮಾರ ಪಾಖಾಲ್, ಕಾರ್ಯದರ್ಶಿ ಪ್ರಭು ತಟ್ಟಪಟ್ಟಿ, ಡಾ. ರಘು ಕೃಷ್ಣಮೂರ್ತಿ, ಡಾ. ಕಪಿಲ್ ಪಾಟೀಲ, ನಿತಿನ್ ಕರ್ಪೂರ, ಸತೀಶ್ ಸ್ವಾಮಿ, ಸೋಮಶೇಖರ ಪಾಟೀಲ, ಹಾವಶೆಟ್ಟಿ ಪಾಟೀಲ, ಬಸವರಾಜ ಧನ್ನೂರ, ಗುಂಡಪ್ಪ ಘೋಡೆ, ನಾಗರಾಜ ಕರ್ಪೂರ, ಆದೀಶ್ ವಾಲಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net