ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ನೇಮಕ

anil desm
Published on

ಔರಾದ್: ಪಟ್ಟಣದ ಅಮರೇಶ್ವರ ಪದವಿ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಅನೀಲಕುಮಾರ ದೇಶಮುಖ (ಅಧ್ಯಕ್ಷ), ಸುಧಾಕಾರ ಕೊಳ್ಳುರ್ (ಉಪಾಧ್ಯಕ್ಷ), ಅಶೋಕ ಶೆಂಬೆಳ್ಳೆ (ಪ್ರಧಾನ ಕಾರ್ಯದರ್ಶಿ), ಸಂಗಮೇಶ ಚಿದ್ರೆ (ಕಾರ್ಯದರ್ಶಿ), ನಾಗಯ್ಯ ಸ್ವಾಮಿ, ಮನ್ಮಥ ಸ್ವಾಮಿ (ಸಹ ಕಾರ್ಯದರ್ಶಿ), ಅಶೋಕ ಅಲ್ಮಾಜೆ (ಖಜಾಂಚಿ), ಉಜ್ವಲಾ ಆಣದೂರೆ, ದೀಪಾಲಿ ಕೇದಾರೆ (ಮಹಿಳಾ ಪ್ರತಿನಿಧಿ)ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯೆ ಜಯದೇವಿ ತೇಲಿ, ಬಾಬುರಾವ ಬೋರಾಳೆ, ಬಂಡೆಪ್ಪ ಕಂಟೆ, ಸತೀಶ್ ಸಿಂಧೆ, ಮಹಾದೇವ ಚಿಟಗೀರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net