ಭಾಲ್ಕಿ: ತಾಲೂಕಿನ ಲಾಧಾ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಭಾತಂಬ್ರಾ-ಕೊಡಂಬಲ ಜಗದ್ಗುರು ನಿರಂಜನ ಸಂಸ್ಥಾನ ಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಪ್ರವಚನ ನಡೆಸಿ ಕೊಡಲಿದ್ದಾರೆ.
ಆ.4 (ಭಾನುವಾರ)ರಿಂದ ಆ.10 ರವರೆಗೆ ಪ್ರತಿದಿನ ರಾತ್ರಿ 7ರಿಂದ 9 ರವರೆಗೆ ಮುಕ್ತಾಂಗಿನಿ ಶಿವಶರಣೆ ಮುಕ್ತಾಯಕ್ಕ ವಿಷಯದ ಮೇಲೆ ಪ್ರವಚನ ನೀಡಲಿದ್ದಾರೆ.