ಖಾಶೆಂಪುರ ಜಾತ್ರಾ ಮಹೋತ್ಸವ ಅದ್ದೂರಿ

Khashempur
Published on

ಬೀದರ್: ಖಾಶೆಂಪುರ(ಪಿ) ಗ್ರಾಮ ದೇವತೆ ಮರಿಗೆಮ್ಮ ತಾಯಿ ಜಾತ್ರೋತ್ಸವ ಅದ್ದೂರಿಯಾಗಿ ಶ್ರದ್ಧಾ ಭಕ್ತಿಯಿಂದ ಜರುಗಿತು. ಬೆಳಗ್ಗೆಯಿಂದ ರಾತ್ರಿವರೆಗೆ ಧಾರ್ಮಿಕ, ಅಧ್ಯಾತ್ಮ ಕಾರ್ಯಕ್ರಮಗಳ ಜತೆ ಹೊಸ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.
ಜಾತ್ರೆ ದಿನವೇ ಮರಿಗೆಮ್ಮ ದೇವಿ ಮೂರ್ತಿ ತಯಾರಿಸುವ ಸಂಪ್ರದಾಯ ಚಾಲ್ತಿಯಲ್ಲಿದೆ. ಪ್ರಸಕ್ತ ವರ್ಷವೂ ಮಂಗಳವಾರ ಬೆಳಗ್ಗೆ ಸ್ಥಳೀಯರು ನೀಡಿದ ಮರದ ತುಂಡುಗಳಿಂದ ಬಡಿಗೇರ ಮನೆಯವರು ಸಂಜೆವರೆಗೆ ಮೂರ್ತಿಗಳನ್ನು ತಯಾರಿಸಿದರು. ಸಂಜೆ ಬಡಿಗೇರ ಮನೆಯಿಂದ ಬಾಜಾ ಭಜಂತ್ರಿಯೊಂದಿಗೆ ಮೆರವಣಿಗೆಯಲ್ಲಿ ಮೂರ್ತಿಗಳನ್ನು ತಂದು ಮರಿಗೆಮ್ಮ ದೇವಿ ಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು.
ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಪ್ರಮುಖರಾದ ಶಾಂತಲಿಂಗ ಸಾವಳಗಿ, ರಾಜು ಖಾಶೆಂಪುರ, ಸಂಜು ಖಾಶೆಂಪುರ, ಬಾಬು ಖಾಶೆಂಪುರ, ಅನೀಲ ಲಚ್ಚನೋರ್, ಶರಣಪ್ಪ ಖಾಶೆಂಪುರ, ಭಜರಂಗ ತಮಗೊಂಡ, ಮಾರುತಿ ಬಸಗೊಂಡ, ಸುನೀಲ ಗುಮಾಸ್ತಿ, ವಿಶ್ವನಾಥ ಬಾಲೇಬಾಯಿ, ಯೋಗೇಶ್ ವಗ್ಗೆ, ರಾಜು ವಗ್ಗೆ, ಮಲ್ಲು ಮುದುಕಪ್ಪನವರ್, ಕೃಷ್ಣಾಚಾರಿ, ಮಂಜುನಾಥ ಬಾಲೇಬಾಯಿ, ಧೂಳಪ್ಪ ಪಟ್ನೆ, ಸುನೀಲ ಖಾಶೆಂಪುರ, ಪವನ್ ವಗ್ಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net