ಚಿಟಗುಪ್ಪ-ಶಾಮತಾಬಾದ್ ರಸ್ತೆ ಕಾಮಗಾರಿಗೆ ಚಾಲನೆ

Chitaguppa 1
Published on

ಚಿಟಗುಪ್ಪ: ರಸ್ತೆಗಳ ಸುಧಾರಣೆ ಗ್ರಾಮೀಣ ಭಾಗದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಕಲ್ಯಾಣ ಕನರ್ಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಅಡಿ ಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಸಂಪರ್ಕಿಸುವ ಶಾಮತಾಬಾದ್ ವರೆಗಿನ ರಸ್ತೆ ಕಾಮಗಾರಿಗೆ ಶಾಮತಾಬಾದ್ ಕ್ರಾಸ್ ನಲ್ಲಿ ಚಾಲನೆ ನೀಡಿದ ಅವರು, 2.250 ಕಿಮೀ ರಸ್ತೆ ಡಾಂಬರೀಕರಣ ಕೆಲಸ ಅಂದಾಜು 2.95 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಗುಣಮಟ್ಟ ಜತೆಗೆ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ನಿರ್ಲಕ್ಷಿಸಿದರೆ ಸಂಬಂಧಿತ ಗುತ್ತಿಗೆದಾರ ಮತ್ತು ಅಧಿಕಾರಿಗಳನ್ನು ಹೊಣೆ ಮಾಡುವುದಾಗಿ ಎಚ್ಚರಿಸಿದರು.
ಪ್ರಮುಖರಾದ ವಿಶ್ವನಾಥ ಪಾಟೀಲ್ ಮಾಡಗೂಳ, ಡಾ.ಭದ್ರೇಶ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್ ಬೆಳಕೇರಾ, ಮಾಣಿಕರಡ್ಡಿ, ನಾಗಭೂಷಣ ಸಂಗಮ, ಗಿರೀಶ್ ತುಂಬಾ, ಜ್ಞಾನದೇವ ಧುಮಾಳೆ, ಸುನೀಲ ಪತ್ರಿ, ಲಕ್ಷ್ಮಣ, ಮಹೇಶ ಮಹಾಜನ, ಶಿವಕುಮಾರ ಚನ್ನೂರ, ಪ್ರಶಾಂತ ಜವಳಿ, ಪರಮೇಶ ಬಬಡಿ, ಸಚಿನ್ ಮಠಪತಿ, ರಾಜಗೋಪಾಲ ಐನಾಪುರ, ಶಾಮರಾವ ಭೂತಾಳೆ, ಅಮಿತ ತೊಗಲೂರ, ಬಸಪ್ಪ ಪಡಗಿ, ಸಂಜು ಪತನಕರ್, ಶುಭಂ, ಕಿರಣ, ನರಸಪ್ಪ, ರಾಜು, ಅಮರ, ಶ್ರೀಕಾಂತ, ತುಕಾರಾಮ, ಪ್ರವೀಣ ರಾಜಾಪುರೆ ಇದ್ದರು.

ಮಾಡಗೂಳ-ಮಂಗಲಗಿ ರೋಡ್ ಕೆಲಸ ಶುರು
ಮಾಡಗೂಳ-ಮಂಗಲಗಿ ರಸ್ತೆ ಕಾಮಗಾರಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಭೂಮಿಪೂಜೆ ನೆರವೇರಿಸಿದರು. ಬಹುದಿನದ ಬೇಡಿಕೆ ಈಡೇರಿಕೆಗೆ ಕಾಲ ಕೂಡಿಬಂದಿದೆ. ಮಾಡಗೂಳದಿಂದ ಬೀದರ್ ದಕ್ಷಿಣ ಕ್ಷೇತ್ರದ ಮಂಗಲಗಿಕ್ಕೆ ಸಂಪರ್ಕಿಸುವ 1.05 ಕಿಮೀ ರಸ್ತೆ ಕಾಮಗಾರಿಗೆ 2023-24ರ ಕೆಕೆಆರ್.ಡಿಬಿ ಅಡಿ 1.40 ಕೋಟಿ ರೂ. ವೆಚ್ಚದಲ್ಲಿ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಪ್ರಮುಖರಾದ ವಿಶ್ವನಾಥ ಪಾಟೀಲ್, ನಾರಾಯಣರಡ್ಡಿ ಶೇರಿಕಾರ, ಪ್ರಭುರಾವ ಪೊಲೀಸ್ ಪಾಟೀಲ್, ಬಸವರಾಜ ಪಾಟೀಲ್, ದೇವಿಂದ್ರ ಶರ್ಮಾ, ವೈಜಿನಾಥ ದೇವಣಿ, ಮಾರುತಿ ಬಸಮನಳ, ಮಾಣಿಕರಾವ ದುಖಾಂದಾರ್, ಶಿವಕುಮಾರ ಮದರಗಾಂವ, ವಿಜಯಕುಮಾರ ಮದರಗಾಂವ, ಸೂರ್ಯಕಾಂತ ಶರ್ಮಾ, ಧನರಾಜ ದುಖಾಂದಾರ್, ವಿನೋದ ಪಾಟೀಲ್, ಮಹೇಶ ಮದರಗಾಂವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net