ವಿದ್ಯಾರ್ಥಿಗಳ ಮಿಂಚಿನ ಪ್ರತಿಭಟನೆ

kamalnagar bus
Published on

ಕಮಲನಗರ: ಕಮಲನಗರದಿಂದ ಮದನೂರ, ಖತಗಾಂವ, ಹಕ್ಯಾಳ, ಮುೂರ್ಕಿ ಮೂಲಕ ಔರಾದ್ ಗೆ ಚಲಿಸುವ ಬಸ್ ಗಳನ್ನು ಅನಾವಶ್ಯಕವಾಗಿ ಅನ್ಯ ಮಾರ್ಗದ ಮುಖಾಂತರ ಸಂಚಾರ ಆರಂಭಿಸಿರುವ ಹಿನ್ನೆಲೆಯಲ್ಲಿ ವಿವಿಧ ಗ್ರಾಮದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬುಧವಾರ ಸಾಯಂಕಾಲ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಿಂಚಿನ ಪ್ರತಿಭಟನೆ ನಡೆಸಿದರು.
ಈಶಾನ್ಯ ಸಾರಿಗೆ ನಿಗಮದ ಬಸ್ ರಸ್ತೆ ತಡೆದು ಹೋರಾಟ ಮಾಡಿದ ಮದನೂರ, ಖತಗಾಂವ, ಹಕ್ಯಾಳ, ಮೂರ್ಕಿ ಗ್ರಾಮದ ವಿದ್ಯಾರ್ಥಿಗಳು, ಅನೇಕ ಗ್ರಾಮಗಳ ಬಡ ವಿದ್ಯಾರ್ಥಿಗಳು ಕಮಲನಗರ ಪಟ್ಟಣದಲ್ಲಿ ಶಾಲೆ, ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ. ಸಾರಿಗೆ ನಿಗಮದ ಅಧಿಕಾರಿಗಳು ಇಲಾಖೆಗೆ ಆದಾಯದ ಕೊರತೆ ನೆಪವೊಡ್ಡಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಈ ಭಾಗದ ನೂರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ತಕ್ಷಣ ಮೊದಲಿನಂತೆ ಬಸ್ ಸಂಚಾರ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಮಲನಗರ-ಔರಾದ್ ಬಸ್ ವಾಯಾ ಮದನೂರ, ಮೂರ್ಕಿ ಮಾರ್ಗದಲ್ಲಿ ಸಂಚಾರ ಆರಂಭಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ಬಸ್ ತಡೆದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ಸಾರಿಗೆ ನಿಗಮದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಶಶಿಕಾಂತ ಮಂಗಳೂರೆ ತಿಳಿಸಿದ್ದಾರೆ.
ಮದನೂರ ಗ್ರಾಮದ ದೇವಪ್ಪ ಬಿರಾದಾರ್ ಮಾತನಾಡಿದರು. ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net