ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಕೆಲಸ ಮಾಡಿ

30BK1
Published on

ಬಸವಕಲ್ಯಾಣ: ವಚನ ಸಾಹಿತ್ಯ, ಶರಣ ಸಂಸ್ಕೃತಿಯ ಕುರಿತು ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಅವರಲ್ಲಿ ಸಂಸ್ಕಾರ ಬೆಳೆಸುವ ಕೆಲಸ ಮನೆ-ಮನೆಗಳಲ್ಲಿ ನಡೆಯಬೇಕು ಎಂದು ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಪೂಜ್ಯ ಜಗದ್ಗುರು ಮಾತೆ ಗಂಗಾದೇವಿ ಹೇಳಿದರು.
ವೈರಾಗ್ಯನಿಧಿ ಅಕ್ಕಮಹಾದೇವಿ ಮಹಿಳಾ ಮಹಾಮಂಡಳ ಟ್ರಸ್ಟ್, ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿ ವತಿಯಿಂದ ಇಲ್ಲಿನ ಹೊಸಪೇಟ್ ಬಡಾವಣೆಯ ಅಕ್ಕಮಹಾದೇವಿ ಚೌಕಿ ಮಠದಲ್ಲಿ ಆಯೋಜಿಸಿದ ಮಹಿಳಾ ಅನುಭವ ಮಂಟಪ ಗೋಷ್ಠಿ, ಇಷ್ಟಲಿಂಗಯೋಗ, ಮಂತ್ರ-ಜಪ, ಭಜನೆಯ ಮಂಗಲ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಹಿಳಾ ಮಂಡಳದಿಂದ ಒಂದು ತಿಂಗಳು ನಿರಂತರವಾಗಿ ನಡೆಸಿಕೊಂಡುಬಂದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಬಿಡಿವಿಸಿ ನಿರ್ದೇಶಕಿ ಪ್ರೊ.ವಿಜಯಲಕ್ಷ್ಮೀ ಗಡ್ಡೆ, ವಿಶ್ವಸ್ಥ ಸಮಿತಿ ಉಪಾಧ್ಯಕ್ಷ ಡಾ.ಜಿ.ಎಸ್.ಭುರಾಳೆ. ಶ್ರೀ ಬಸವೇಶ್ವರ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಪ್ರೊ.ಚನ್ನಪ್ಪ ಪ್ರತಾಪುರೆ ಮಾತನಾಡಿದರು.
ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ನಿರ್ದೇಶಕ ರೇವಣಪ್ಪ ರಾಯವಾಡೆ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಬಸವರಾಜ ತೊಂಡಾರೆ, ಬಸವತತ್ವ ಪ್ರಸಾರ ಸಂಸ್ಥೆ ಅಧ್ಯಕ್ಷ ಶಂಕ್ರಣ್ಣ ಕೊಳಕುರ್, ಮಂಗಲಾ ಪಾಟೀಲ್, ಸುಲೋಚನಾ ಗುದಗೆ, ಶಿವಲೀಲಾ ಹೊಳಕುಂದೆ, ಮಹಾದೆವಿ ರಾಜೋಳೆ, ಸುರೇಖಾ ಮಂಗಾ, ಸರಸ್ವತಿ ಗೌರ, ನಿರ್ಮಲಾ ಶಿವಣಕರ್, ಜೈಶ್ರೀ ಪಾಟೀಲ್ ಇತರರಿದ್ದರು.
ಮಹಿಳಾ ಮಹಾಮಂಡಳ ಟ್ರಸ್ಟ್‌ನ ಅಧ್ಯಕ್ಷೆ ಸುಲೋಚನಾ ಮಾಮಾ ಪ್ರಾಸ್ತಾವಿಕ ಮಾತನಾಡಿದರು. ಮಹಾಸಭಾ ಮಹಿಳಾ ಘಟಕದ ತಾಲೂಕಾಧ್ಯಕ್ಷೆ ರಾಜೇಶ್ವರಿ ಖೂಬಾ ಸ್ವಾಗತಿಸಿದರು. ಸಂಗಮೇಶ ತೊಗರಖೇಡೆ ನಿರೂಪಣೆ ಮಾಡಿದರು. ಬಸಮ್ಮ ಕಾಳಗೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net