ಸಮಯ, ಸೌಲಭ್ಯ ಸಮರ್ಪಕ ಬಳಸಿಕೊಳ್ಳಿ

30BK2
Published on

ಬಸವಕಲ್ಯಾಣ: ವಿದ್ಯಾರ್ಥಿಗಳು ಸಮಯ, ಸೌಲಭ್ಯ ಮತ್ತು ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉನ್ನತ ಸ್ಥಾನಕ್ಕೆ ಹೋಗಬೇಕು ಎಂದು ನಗರ ಠಾಣೆ ಪಿಎಸ್ಐ ಅಂಬರೀಶ್ ವಾಗ್ಮೊಡೆ ಹೇಳಿದರು.
ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ತಮ್ಮ ಶಕ್ತಿ ಸಾಮಥ್ರ್ಯವನ್ನು ಓದು, ಬರಹ, ಉದ್ಯೋಗಗಳಲ್ಲಿ ತೋರಿಸಬೇಕು. ಉತ್ತಮ ನಾಗರಿಕರಾಗಿ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಯಾವುದೇ ಅಪರಾಧದ ಚಟುವಟಿಕೆಯಲ್ಲಿ ಭಾಗವಹಿಸದೆ, ದುಶ್ಚಟಗಳಿಗೆ ಒಳಗಾಗದೆ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುವ ಜವಾಬ್ದಾರಿ ಎಲ್ಲ ವಿದ್ಯಾರ್ಥಿಗಳ ಮೇಲಿದೆ. ಶೈಕ್ಷಣಿಕ ಜೀವನದ ನಂತರ ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಡುವ ಸಿದ್ಧತೆಗೆ ಕಾಲೇಜು ವೇದಿಕೆಯಾಗಿದೆ. ಕಾಲೇಜು ಹಂತದಿಂದ ಸಾಮಾಜಿಕ ಬದುಕಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಎಚ್ಚರಿಕೆಗಳು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಬಿಡಿಪಿಸಿ ನಿರ್ದೇಶಕಿ, ನಿವೃತ್ತ ಪ್ರಾದ್ಯಾಪಕಿ ಪ್ರೊ.ವಿಜಯಲಕ್ಷ್ಮೀ ಗಡ್ಡೆ ಮಾತನಾಡಿ, ಶ್ರಮ ಮತ್ತು ಶ್ರದ್ಧೆಯಿಂದ ನಿರಂತರ ಅಧ್ಯಯನ ಮಾಡಿದರೆ ಯಶಸ್ಸು ಸಿಗುತ್ತದೆ. ಅಭ್ಯಾಸದ ಜತೆಗೆ ವಿನಯ ಮತ್ತು ವಿವೇಕ ಬೆಳೆಸಿಕೊಳ್ಳಬೇಕು. ಓದುವ ಛಲ, ದಡ ಮುಟ್ಟುವ ಆತ್ಮವಿಶ್ವಾಸದಿಂದ ಬದುಕನ್ನು ಜಯಿಸಬಹುದು ಎಂದರು.
ಉಪನ್ಯಾಸಕರಾದ ಶ್ರೀನಿವಾಸ ಉಮಾಪುರೆ, ವಿದ್ಯಾರ್ಥಿಗಳಾದ ಪಾರ್ವತಿ, ನಂದಿನಿ ಮಾಶೆಟ್ಟೆ, ವಿಶಾಲ, ಅರುಣ ಗಾಯಕವಾಡ ಮಾತನಾಡಿದರು. ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ನಿರ್ದೇಶಕರಾದ ಸುಭಾಷ ಹೊಳಕುಂದೆ, ಜಗನ್ನಾಥ ಖೂಬಾ, ರೇವಣಪ್ಪ ರಾಯವಾಡೆ, ಬಸವವೇಶ್ವರ ಪಿಜಿ ಕಾಲೇಜು ಪ್ರಾಚಾರ್ಯೆ ಡಾ.ಶಾಂತಲಾ ಪಾಟೀಲ್, ಉಪನ್ಯಾಸಕರಾದ ಅಶೋಕರಡ್ಡಿ ಗದಲೆಗಾಂವ, ಶ್ರೀನಿವಾಸ ಉಮಾಪುರೆ, ಗುರುದೇವಿ, ನಿಲಮ್ಮಾ, ಪ್ರಭಾಕರ್, ಗಂಗಾಧರ ಸಾಲಿಮಠ, ಗಣೇಶ ಮೇತ್ರೆ, ಪ್ರಶಾಂತ ಬುಡಗೆ, ವಿವೇಕಾನಂದ ಸಿಂಧೆ, ರೋಶನ್ ಬಿ., ಜಗದೇವಿ, ಸೌಮ್ಯ, ಪ್ರವೀಣ ಇದ್ದರು.
ಕಾಲೇಜು ಮಟ್ಟದಲ್ಲಿ ಏರ್ಪಡಿಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕವಿತಾ ಬಿ.ಎಸ್ಸಿ, ವಿಶಾಲ ಬಿ.ಎ., ಶ್ರೇಯಾ ಬಿ.ಕಾಂ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ್ ಪ್ರಾಸ್ತಾವಿಕ ಮಾತನಾಡಿದರು. ಡಾ.ಬಸವರಾಜ ಖಂಡಾಳೆ ಸ್ವಾಗತಿಸಿದರು. ಸಂಗೀತಾ ಮಹಾಗಾಂವೆ ನಿರೂಪಣೆ ಮಾಡಿದರು. ಚನ್ನಬಸಪ್ಪ ಗೌರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net