ವ್ಯಾಪಾರಕ್ಕೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಿ

29blk1
Published on

ಭಾಲ್ಕಿ: ಪಟ್ಟಣದಲ್ಲಿ ತರಕಾರಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ವಾರದೊಳಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ತರಕಾರಿ ವ್ಯಾಪಾರಿಗಳ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿದ ಅವರು, ಸ್ಥಳದಲ್ಲಿದ್ದ ಪುರಸಭೆ ಅಧಿಕಾರಿಗೆ ಸೂಚಿಸಿ, ಸಂಗಮೇಶ ಚಿತ್ರ ಮಂದಿರ ರಸ್ತೆಯ ಫುಲೆ ವೃತ್ತ ಸಮೀಪದ ಖಾಲಿ ನಿವೇಶನದಲ್ಲಿ 135 ತರಕಾರಿ ವ್ಯಾಪಾರಿಗಳಿಗೆ 10/12 ಅಳತೆಯ ನಿವೇಶನ ನೀಡಬೇಕು ಎಂದು ನಿರ್ದೇಶನ ನೀಡಿದರು.
ಪ್ರಮುಖರಾದ ಅಬ್ದುಲ್ ಸತ್ತಾರ್, ಅಬ್ದುಲ್ ಗಫಾರ್, ಎಂ.ಡಿ.ಮೊಯೀಸ್, ನಸೀರಮಿಯ್ಯ, ಇಸ್ಮಾಯಿಲ್ ಎಡುರೆ, ರಫೀಕ್ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net