ಸಿದ್ಧಾಂಥ ಶಿಖಾಮಣಿ ಗ್ರಂಥ ಅರ್ಪಣೆ ಅಭಿಯಾನ

Shivayya Swamy
Published on

ಬೀದರ್: ಶ್ರಾವಣ ನಿಮಿತ್ತ ಆಗಸ್ಟ್ 4 ರಿಂದ ಸೆಪ್ಟೆಂಬರ್ 2 ರ ವರೆಗೆ ಸಿದ್ಧಾಂಥ ಶಿಖಾಮಣಿ ಗ್ರಂಥ ಅರ್ಪಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಸಾಂಸ್ಥಿಕ ಪ್ರಾಣಿ ನೀತಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ತಿಳಿಸಿದ್ದಾರೆ.
ಮನುಕುಲದ ಶ್ರೇಷ್ಠ ಗ್ರಂಥವಾದ ಸಿದ್ಧಾಂಥ ಶಿಖಾಮಣಿ ಅಂತರರಾಷ್ಟ್ರೀಯ ಭಾಷೆಗಳೂ ಸೇರಿದಂತೆ 21 ಭಾಷೆಗಳಿಗೆ ತರ್ಜುಮೆಯಾಗಿದೆ. ಗ್ರಂಥದ ಪ್ರಚಾರ ಹಾಗೂ ಪ್ರಸಾರದ ಉದ್ದೇಶದಿಂದ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಐಎಎಸ್ ಅಧಿಕಾರಿಗಳು, ವಿಶ್ವವಿದ್ಯಾಲಯಗಳ ಕುಲಪತಿಗಳು, ಆಯಾ ರಾಜ್ಯಗಳ ರಾಜ್ಯ ಸಚಿವರು, ಲೋಕಸಭೆ ಸದಸ್ಯರು, ಕೇಂದ್ರ ಸಚಿವರು, ವಿದೇಶಿ ರಾಯಭಾರಿಗಳು ಮೊದಲಾದವರಿಗೆ ಗ್ರಂಥ ಕೊಡಲಾಗುವುದು ಎಂದು ತಿಳಿಸಿದ್ದಾರೆ.
ಅಭಿಯಾನದಲ್ಲಿ ಒಟ್ಟು 1,008 ಗ್ರಂಥಗಳನ್ನು ವಿತರಿಸಲಾಗುವುದು. ಈಗಾಗಲೇ ಬಹಳಷ್ಟು ಜನ ಸಿದ್ಧಾಂಥ ಶಿಖಾಮಣಿ ಗ್ರಂಥದಲ್ಲಿಯ ತತ್ವಗಳನ್ನು ಪಾಲಿಸುತ್ತಿದ್ದಾರೆ. ಅಭಿಯಾನದಿಂದಾಗಿ ಗ್ರಂಥವನ್ನು ದೇಶ ಹಾಗೂ ವಿದೇಶಗಳಿಗೆ ತಲುಪಿಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net