

ಬೀದರ್: ಜುಲೈ 31 ರಂದು ರಾತ್ರಿ 9.15ಕ್ಕೆ ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಹಿಂದಿ ಚಲನಚಿತ್ರದ ಖ್ಯಾತ ಹಿನ್ನೆಲೆ ಗಾಯಕ ದಿ. ಮೊಹಮ್ಮದ್ ರಫಿ ಅವರ ಪುಣ್ಯತಿಥಿ ಅಂಗವಾಗಿ ‘ಮುಝೆ ಭುಲಾನಾ ಪಾವೋಗೇ’ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ. ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕುಪೇಂದ್ರ ಶಾಸ್ತ್ರಿ ಕೃಷ್ಣಮೂರ್ತಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬಾನುಲಿ ಅಭಿಮಾನಿ ಕೇಳುಗರು, ಮೊಹಮ್ಮದ್ ರಫಿ ಅವರ ಅಭಿಮಾನಿಗಳು ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದು ಕುಪೇಂದ್ರ ಶಾಸ್ತ್ರಿ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.