

ಔರಾದ್: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಬೀದರ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಕಲಾರ ಗ್ರಾಮದ ಸುಧಾಮ ಮಾಣಿಕ ಹಾಗೂ ಅನಾರೋಗ್ಯದಿಂದಾಗಿ ದಾಖಲಾಗಿರುವ ಖೇಡ್ ಗ್ರಾಮದ ವೈಜಿನಾಥ ಬಿರಾದಾರ್ ಆರೋಗ್ಯವನ್ನು ಶಾಸಕ ಪ್ರಭು ಚವ್ಹಾಣ್ ಭಾನುವಾರ ವಿಚಾರಿಸಿದರು.
ನಿಮ್ಮ ಕುಟುಂಬದ ಜತೆ ನಾನಿರುವೆ. ಯಾವ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ. ಸಹಾಯ ಬೇಕಿದ್ದಲ್ಲಿ ಸದಾ ಸಿದ್ಧ. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕೆಂದು ವೈದ್ಯರಿಗೆ ಚವ್ಹಾಣ್ ಸೂಚಿಸಿದರು.
ಪ್ರಮುಖರಾದ ರಾಮಶೆಟ್ಟಿ ಪನ್ನಾಳೆ, ಪ್ರವೀಣ ಕಾರಬಾರಿ, ಸಚಿನ್ ರಾಠೋಡ್, ಸಚಿನ್ ಬಿರಾದಾರ್, ಬಾಲಾಜಿ ಬಿರಾದಾರ್, ಬಾಲಾಜಿ ವಾಗಮೋರೆ, ಭರತ ಕದಂ ಇತರರಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಬೋಂತಿ ತಾಂಡಾದ ಬಿಜೆಪಿ ಬೂತ್ ಅಧ್ಯಕ್ಷ ವಸಂತ ರಾಠೋಡ್ ಮನೆಯಲ್ಲಿ ಶಾಸಕ ಚವ್ಹಾಣ್ ವೀಕ್ಷಿಸಿದರು.