

ಭಾಲ್ಕಿ: ಜಿಲ್ಲೆಯ ಕಾರಂಜಾ ಜಲಾಶಯದ ಬಳಿ ಗಾರ್ಡನ್ ನಿರ್ಮಿಸಬೇಕು ಎಂದು ಜೆಡಿಎಸ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಶಾಂತಯ್ಯ ಬಿ. ಸ್ವಾಮಿ ಮನವಿ ಮಾಡಿದ್ದಾರೆ.
ಮೈಸೂರಿನ ಕೆಆರ್.ಎಸ್ ಜಲಾಶಯದ ಬೃಂದಾವನ್ ಗಾರ್ಡನ್ ಮಾದರಿಯಲ್ಲಿ ಕಾರಂಜಾ ಜಲಾಶಯ ಹತ್ತಿರ ಗಾರ್ಡನ್ ನಿರ್ಮಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಕಳೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಹೇಳಿಕೆ ನೀಡಿದರು. ಆದರೆ ಇದೀಗ ಒಂದು ವರ್ಷ ಕಳೆದರು ಇನ್ನು ಗಾರ್ಡನ್ ನಿರ್ಮಿಸುವ ಚಟುವಟಿಕೆ ಆರಂಭವಾಗಿಲ್ಲ. ಸಚಿವರು ನೀಡಿರುವ ಹೇಳಿಕೆಯಂತೆ ಗಾರ್ಡನ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.