

ಬೀದರ್: ಹಿಂದಿನ ಎಸ್ಪಿ ಚನ್ನಬಸವಣ್ಣ ಲಂಗೋಟಿ ಸೇರಿ ರಾಜ್ಯದಲ್ಲಿ ನಡೆದ ಅವಧಿಪೂರ್ವ ವರ್ಗಾವಣೆ ವಿರುದ್ಧ ಸಮಗ್ರ ತನಿಖೆ ಮಾಡಬೇಕು ಎಂದು ಲೋಕಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ತಿಳಿಸಿದ್ದಾರೆ.
ಹಿಂದಿನ ಎಸ್ಪಿ ಲಂಗೋಟಿ ಅವರನ್ನು ಜು.2, ನಂತರ ಜು.5ರಂದು ವರ್ಗ ಮಾಡಿದ್ದು ಖಂಡನೀಯ. ರಾಜ್ಯದಲ್ಲಿ ನಡೆದ ಅವಪೂರ್ವ ವರ್ಗಾವಣೆ ಕುರಿತು ಸಮಗ್ರ ತನಿಖೆಯ ಅಗತ್ಯವಿದೆ. ವರ್ಗಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾರದರ್ಶಕ ನಡೆಯಬೇಕು. ಆದರೆ ಸದ್ಯ ಹೀಗಾಗುತ್ತಿಲ್ಲ. ಅವಪೂರ್ವ ವರ್ಗ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧವಾಗಿದೆ ಎಂದು ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.