

ಬೀದರ್: ಇಲ್ಲಿನ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಡಳಿತ ಮಂಡಳಿಯ 21 ಸದಸ್ಯ (ನಿರ್ದೇಶಕರು) ಸ್ಥಾನಗಳಿಗೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿದೆ.
21ರಲ್ಲಿ ಎರಡು ಸ್ಥಾನ ಮಹಿಳೆಯರಿಗೆ, ಒಂದು ಸ್ಥಾನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿದೆ. ಆ.1ರಿಂದ 7 ರವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3 ರವರೆಗೆ ನಾಮಪತ್ರ ಸಲ್ಲಿಸಬಹುದು. ಆ.8ರಂದು ನಾಮಪತ್ರಗಳ ಪರಿಶೀಲನೆ, ಆ.9ರಂದು ಉಮೇದುವಾರಿಗೆ ವಾಪಸ್ ಪಡೆಯಲು ಕೊನೆಯ ದಿನ. ಅಗತ್ಯ ಬಿದ್ದಲ್ಲಿ ಆ.19ರಂದು ಬೆಳಗ್ಗೆ 8ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ.
ಆಸಕ್ತರು ಬಿವಿಬಿ ಕಾಲೇಜು ರಸ್ತೆಯ, ಅಕ್ಕಮಹಾದೇವಿ ಬಡಾವಣೆಯಲ್ಲಿನ ಸಹಕಾರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಚೇರಿಯಲ್ಲಿ ನಾಮಪತ್ರ ಪಡೆದು, ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.