ಕುರ್ಚಿ ಉಳಿಸಿಕೊಳ್ಳುವ ಬಜೆಟ್

vijay-singh
Published on

ಬೀದರ್: 2024-25ನೇ ಸಾಲಿನ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್ ಕುರ್ಚಿ ಉಳಿಸಿಕೊಳ್ಳುವ ಬಜೆಟ್ ಆಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಟೀಕಿಸಿದ್ದಾರೆ.
ಬೇರೆ ರಾಜ್ಯಗಳನ್ನು ಕಡೆಗಣಿಸಿ, ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಹೆಚ್ಚು ಪ್ರಾಮುಖ್ಯ ನೀಡಿರುವುದು ಹಾಗೂ ಅಧಿಕಅನುದಾನ ಮೀಸಲಿಟ್ಟಿರುವುದುಇದಕ್ಕೆ ನಿದರ್ಶನವಾಗಿದೆಎಂದು ಆರೋಪಿಸಿದ್ದಾರೆ.
ತೆರಿಗೆ ಹಣ ಹಂಚಿಕೆಯಲ್ಲಿಆಗುತ್ತಿರುವಅನ್ಯಾಯ ಸೇರಿ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೆ ರಾಷ್ಟ್ರರಾಜಧಾನಿಯಲ್ಲಿ ಧರಣಿ ನಡೆಸಿತ್ತು. ಆದರೂ, ಕೇಂದ್ರ ರಾಜ್ಯದೊಂದಿಗಿನತನ್ನ ತಾರತಮ್ಯ ನೀತಿಯನ್ನು ಕೈಬಿಟ್ಟಿಲ್ಲ. ಕರ್ನಾಟಕಕ್ಕೆ ಪ್ರಸಕ್ತ ಬಜೆಟ್ ನಲ್ಲೂ ಹೇಳಿಕೊಳ್ಳುವ ಅನುದಾನ ಮೀಡಲಿಡದೆ ಕರ್ನಾಟಕದ ಜನತೆಗೆ ಮೋಸ ಮಾಡಿದೆ ಎಂದು ಆಪಾದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net