

ಬೀದರ್: ರೈತರು, ಮಹಿಳೆಯರು, ಯುವಕರು ಸೇರಿ ಎಲ್ಲ ವರ್ಗದವರಿಗೆ ಕೇಂದ್ರದ ಬಜೆಟ್ ಅನುವು ಮಾಡಿಕೊಟ್ಟಿದೆ ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ.
ಹೊಸ ಶಕ್ತಿ ತುಂಬಿ 2047ರಲ್ಲಿ ವಿಕಸಿತ ಭಾರತ ನಿಮರ್ಾಣಕ್ಕೆ ಮುನ್ನುಡಿ ಬರೆಯಲಿದೆ. ಮಹಿಳಾ ವಿಕಾಸಕ್ಕೆ 3 ಲಕ್ಷ ಕೋಟಿ ರೂ. ಮೀಸಲಿಟ್ಟು ನಾರಿಶಕ್ತಿಗೆ ಮತ್ತಷ್ಟು ಉತ್ತೇಜನ ನೀಡಲಾಗಿದೆ. 1 ಕೋಟಿ ಮನೆಗಳಿಗೆ 300 ಯೂನಿಟ್ ಉಚಿತ ಸೋಲಾರ್ ವಿದ್ಯುತ್ ಬಂಪರ್ ಆಫರ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.