ದೇಶದ ಹಿತಕ್ಕಿಂತ ಅಧಿಕಾರ ಗುರಿ

Rajshekar patil
Published on

ಬೀದರ್: ಕೇಂದ್ರದ ಬಜೆಟ್ ನಲ್ಲಿ ರಾಜ್ಯಕ್ಕೆ ವಿಶೇಷ ಯೋಜನೆಗಳನ್ನು ಘೋಷಿಸಿಲ್ಲ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದ್ದಾರೆ.
ಜನಸಾಮಾನ್ಯರು, ಮಹಿಳೆಯರು, ಯುವಕರು ಸೇರಿ ವಿವಿಧ ವರ್ಗಗಳಿಗೆ ಅನುಕೂಲವಾಗುವಂಥ ಅಂಶಗಳಿಲ್ಲ. ಸರ್ಕಾರ ರಚನೆಗೆ ನೆರವಾದ ಬಿಹಾರ ಹಾಗೂ ಆಂಧ್ರಪ್ರದೇಶಗಳಿಗೆ ಅನುದಾನದ ಹೊಳೆ ಹರಿಸಲಾಗಿದೆ. ದೇಶದ ಹಿತಕ್ಕಿಂತ ಹೇಗಾದರೂ ಮಾಡಿ ಐದು ವರ್ಷ ಅಧಿಕಾರ ಪೂರ್ಣಗೊಳಿಸುವ ಗುರಿ ಬಿಜೆಪಿಯದ್ದು ಎಂದು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net