ಗುರು ಮಾರ್ಗದರ್ಶನ ಬೇಕು

gurupurnime
Published on

ಬಸವಕಲ್ಯಾಣ: ಪ್ರತಿಯೊಬ್ಬರು ಜೀವನದಲ್ಲಿ ಉನ್ನತ ಗುರಿ ಸಾಧಿಸಬೇಕಾದರೆ ಗುರುಗಳ ಮಾರ್ಗದರ್ಶನ ಬೇಕು ಎಂದು ಸಂಸ್ಥಾನ ಗವಿಮಠದ ಪೂಜ್ಯ ಡಾ.ಅಭಿನವ ಘನಲಿಂಗ ರುದ್ರಮನಿ ಶಿವಾಚಾರ್ಯ ಹೇಳಿದರು.
ನಗರದ ಹುಲಿಕಾಂತಿ ಮಠದ ಪರಿಸರದಲ್ಲಿ ಗುರುಪೂರ್ಣಿಮೆ ಹಾಗೂ ಮನೆ ಮನಗಳಲ್ಲಿ ಸದ್ಭಾವ ಚಿಂತನ ಮಾಸಿಕ ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯನಲ್ಲಿರುವ ದುರ್ಗುಣಗಳನ್ನು ತೊಡೆದುಹಾಕಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಮಹತ್ವದ್ದು ಎಂದರು.
ಜೀವನದಲ್ಲಿ ಅಚಲವಾದದ್ದನ್ನು ಸಾಧಿಸಲು ಗುರಿ ಇಟ್ಟುಕೊಳ್ಳಬೇಕು. ಆ ಗುರಿ ತಲುಪಲು ಗುರುವಿನ ಮಾರ್ಗದರ್ಶನ ಪಡೆದರೆ ಯಶಸ್ಸು ಖಚಿತ. ಎಲ್ಲರು ಗುರುವಿನ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶ್ರೀಮದ್ವೀರಶೈವ ಸದ್ಭೋದನ ಸಂಸ್ಥೆ ತಾಲೂಕಾಧ್ಯಕ್ಷ ಡಾ.ಬಸವರಾಜ ಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಬಸವಂತಪ್ಪ ಲವಾರೆ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಬಸವರಾಜ ಸ್ವಾಮಿ ಮಾತನಾಡಿದರು.
ಶ್ರೀಮದ್ವೀರಶೈವ ಸದ್ಭೋದನ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ ದಯಾನಂದ ಶೀಲವಂತ, ರಾಕೇಶ್ ಪೂರ್ವಂತ, ಎ.ಜಿ. ಪಾಟೀಲ್, ಶಾಂತವೀರ ಪೂಜಾರಿ, ರಮೇಶ ಸ್ವಾಮಿ, ಘನಲಿಂಗಯ್ಯ ಸ್ವಾಮಿ, ಮಹಾಂತೇಶ, ಗುರುಲಿಂಗ ಸ್ವಾಮಿ, ಸಂತೋಷ, ಶಿವಯೋಗಿ ಸ್ವಾಮಿ, ಸಂದೀಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net