

ಬೀದರ್: ಸಮಾಜದಲ್ಲಿ ಮನೆ ಮಾಡಿದ್ದ ಅನಿಷ್ಟ ಪದ್ಧತಿ ಹೋಗಲಾಡಿಸಲು ಶರಣರು ತಮ್ಮ ವಚನಗಳ ಮೂಲಕ ಬಹುದೊಡ್ಡ ಕ್ರಾಂತಿ ಮಾಡಿದ್ದಾರೆ ಎಂದು ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸಂಘದ ಅಧ್ಯಕ್ಷ ಪ್ರಭುರಾವ ತರನಳ್ಳಿ ಹೇಳಿದರು.
ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸಂಘದಿಂದ ನಗರದ ಸಿಎಂಸಿ ಬಡಾವಣೆಯಲ್ಲಿ ಏರ್ಪಡಿಸಿದ್ದ ಮಹಾತ್ಮ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವದಲ್ಲಿ ಮಾತನಾಡಿ, ಅಪ್ಪಣ್ಣನವರು 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿ ವಿಶ್ವಗುರು ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಶರಣಪ್ಪ ಚಂದನಹಳ್ಳಿ, ಬೀದರ್ ತಾಲೂಕು ಅಧ್ಯಕ್ಷ ಸುಭಾಷ ಹಳ್ಳಿಖೇಡ(ಕೆ), ಕಾರ್ಯದರ್ಶಿ ಹಣಮಂತರಾವ ಹುಣಜಿ, ಪ್ರಮುಖರಾದ ಶಿವರಾಜ ಹೊಚಕನಳ್ಳಿ, ಶಿವಕುಮಾರ ಚಿದ್ರಿ, ಪ್ರದೀಪ ಔರಾದ್, ಶಾಂತಕುಮಾರ ಆಣದೂರ, ವಿಜಯಕುಮರ ಹಿಲಾಲಪುರ, ರಾಜಶೇಖರ ವರವಟ್ಟಿ, ಮಲ್ಲಿಕಾರ್ಜುನ ಬೇನಚಿಂಚೋಳಿ, ಬಸವರಾಜ ಶ್ರೀಮಂಡಲ, ಶಿವು ಮರಗುತ್ತಿ, ಬಾಬುರಾವ ಚಿದ್ರಿ, ಮಡೆಪ್ಪ ಕಾಳಗೆ, ಶಿವಶರಣಪ್ಪ ಚಾಳಕಾಪುರ, ಪಾರ್ವತಿ, ಪ್ರೇಮಲಾ, ಸುವರ್ಣ, ಲಕ್ಷ್ಮೀ, ಸಂಗೀತಾ, ಕವಿತಾ, ಕನ್ಯಾಕುಮಾರಿ, ಮಲ್ಲಮ್ಮ, ಮಹಾದೇವಿ, ಸೋಮೇಶ್ವರಿ, ನಂದಿನಿ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಮಹೇಶ ಗೊಂದೆಗಾಂವ, ಭೀಮರಾವ ಮಂಗಲಗಿ ಇತರರಿದ್ದರು.