ಹಲಬರ್ಗಾದಲ್ಲಿ ಗುರು ಪೂರ್ಣಿಮೆ 21ರಂದು

Havgilineshwar Shivacharyru - Copy
Published on

ಬೀದರ್: ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಜುಲೈ 21ರಂದು ಗುರು ಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9ಕ್ಕೆ ರಾಚೋಟೇಶ್ವರ ಕರ್ತೃ ಗದ್ದುಗೆಗೆ 111 ಸುಮಂಗಲೆಯರಿಂದ ಕುಂಭಾಭಿಷೇಕ ನಡೆಯಲಿದೆ.
ಬೆಳಿಗ್ಗೆ 11ಕ್ಕೆ ಗುರುವಿನ ಪಾದ ಪೂಜೆ ಜರುಗಲಿದೆ. ನಂತರ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಲಿದ್ದಾರೆ.
ಭಾಲ್ಕಿಯ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ ದಾಸೋಹ ಸೇವೆಗೈಯಲಿದ್ದಾರೆ.
ಹಲಬರ್ಗಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಠದ ಪ್ರಕಟಣೆಯಲ್ಲಿ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net