ಶೈಕ್ಷಣಿಕ ಮಾರ್ಗದರ್ಶಿ ಕಾರ್ಯಕ್ರಮ

Akkamahadevi High School Programme
Published on

ಬೀದರ್: ನಗರದ ಅಕ್ಕಮಹಾದೇವಿ ಕನ್ಯಾ ಪ್ರೌಢಶಾಲೆಯಲ್ಲಿ ಸೋಮವಾರ 8ನೇ, 9ನೇ ಹಾಗೂ 10ನೇ ವಿದ್ಯಾರ್ಥಿಗಳ ಸ್ವಾಗತ ಮತ್ತು ಶೈಕ್ಷಣಿಕ ಮಾರ್ಗದರ್ಶಿ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸಲು ಪ್ರಯತ್ನಿಸಬೇಕು ಎಂದು ನಿವೃತ್ತ ಮುಖ್ಯಶಿಕ್ಷಕ ಚಂದ್ರಕಾಂತ ಗಡಿಪಾಟೀಲ ಸಲಹೆ ಮಾಡಿದರು.
ವಿದ್ಯಾರ್ಥಿಗಳು ಆದರ್ಶ ಪ್ರಜೆಗಳಾಗಬೇಕು ಎಂದು ನಿವೃತ್ತ ಮುಖ್ಯಶಿಕ್ಷಕಿ ಇಂದಿರಾ ಮಜ್ಜಿಗೆ ಹೇಳಿದರು.
ಮುಖ್ಯಶಿಕ್ಷಕಿ ಆರ್ಷಿಯಾ ಜಬಿನ್ ಅಧ್ಯಕ್ಷತೆ ವಹಿಸಿದ್ದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಿರಿಯ ಆಡಳಿತಾಧಿಕಾರಿ ಸತೀಶ್ ಹೊನ್ನಳ್ಳಿ ಉಪಸ್ಥಿತರಿದ್ದರು.
ಶಿಕ್ಷಕಿ ಜಲದೇವಿ ನಿರೂಪಿಸಿದರು. ಚುಕ್ಕಿರಾಣಿ ಸ್ವಾಗತಿಸಿದರು. ನಾಗೇಶ್ವರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net