

ಬೀದರ್: ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಜು.28ರಂದು ನಗರದಲ್ಲಿ ಪತ್ರಿಕಾ ದಿನಾಚರಣೆ ಆಯೋಜನೆಗೆ ತೀರ್ಮಾನಿಸಲಾಗಿದೆ.
ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅದ್ದೂರಿ ಜತೆಗೆ ಅರ್ಥಪೂರ್ಣ ಕಾರ್ಯಕ್ರಮ ನಡೆಸಲು ಸಮಿತಿ ರಚಿಸಲಾಗಿದ್ದು, ಬಾಬು ವಾಲಿ (ಅಧ್ಯಕ್ಷ), ಆನಂದ ದೇವಪ್ಪ (ಪ್ರಧಾನ ಕಾರ್ಯದರ್ಶಿ), ಮಾಳಪ್ಪ ಅಡಸಾರೆ (ಕೋಶಾಧ್ಯಕ್ಷ), ಮಲ್ಲಿಕಾರ್ಜುನ ಬಿರಾದಾರ್ (ಸಂಚಾಲಕ) ಅವರನ್ನು ಸಮಿತಿಗೆ ನೇಮಕ ಮಾಡಲಾಯಿತು.
ಶೀಘ್ರದಲ್ಲಿ ಇನ್ನೊಂದು ಸಭೆ ಕರೆದು ಕಾರ್ಯಕ್ರಮದ ಸಮಯ ಹಾಗೂ ಅತಿಥಿಗಳನ್ನು ಅಂತಿಮಗೊಳಿಸಲು ನಿರ್ಧರಿಸಿತು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅಧ್ಯಕ್ಷತೆಯ ಸಭೆಯಲ್ಲಿ ಪತ್ರಕರ್ತರಾದ ಖಾಜಿ ಅಲಿಯೊದ್ದೀನ್ (ಅಲಿಬಾಬಾ), ಅಶೋಕ ಕರಂಜಿ, ಅಪ್ಪಾರಾವ ಸೌದಿ, ಶಶಿಕುಮಾರ ಪಾಟೀಲ್, ಶ್ರೀನಿವಾಸ ಚೌಧರಿ, ಶಿವಕುಮಾರ ಸ್ವಾಮಿ, ಕಡ್ಯಾಳ ರಾಜು, ಅಜಯ, ಕಾಮಶೆಟ್ಟಿ ಬಸವರಾಜ, ಬಸವರಾಜ ಪವಾರ್, ವಿಜಯಕುಮಾರ, ಸುನೀಲಕುಮಾರ ಹೊನ್ನಾಳೆ, ಮಾರುತಿ ಭಾವಿದೊಡ್ಡಿ, ಶ್ರೀಕಾಂತ ಚಿಮಕೋಡೆ, ಪ್ರದೀಪ ಬಿರಾದಾರ್ ಇತರರಿದ್ದರು.