ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮ

Nirna
Published on

ಚಿಟಗುಪ್ಪ: ಬೀದರ್ ದಕ್ಷಿಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವೆ. ಕುಡಿಯುವ ನೀರು, ಚರಂಡಿ ಸೇರಿ ವಿವಿಧ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ತಾಲೂಕಿನ ನಿರ್ಣಾ ಗ್ರಾಮದಲ್ಲಿ ಒಂದು ಕೋಟಿ ರೂ. ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೆ ಮೂಲಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವೆ ಎಂದು ತಿಳಿಸಿದರು.
ನಿರ್ಣಾ ಗ್ರಾಮದಲ್ಲಿ ಬಸ್ ನಿಲ್ದಾಣ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಂಪೌಂಡ್, ಶೌಚಗೃಹ ನಿರ್ಮಾಣ, ಸರ್ಕಾರಿ ಪ್ರೌಢಶಾಲೆಯಲ್ಲಿ ಬಾಲಕಿಯರಿಗಾಗಿ ಕೊಳವೆ ಬಾವಿ ಸಹಿತ ಶೌಚಗೃಹ ನಿರ್ಮಾಣ, ಎರಡು ಓಣಿಯಲ್ಲಿ ಹೈಮಸ್ಟ್ ಲೈಟ್, ಸಿಸಿ ರಸ್ತೆ, ಚರಂಡಿ, ಅಂಬಿಗರ ಚೌಡಯ್ಯ ದೇವಸ್ಥಾನದ ಬಳಿ ಸಾಂಸ್ಕೃತಿಕ ಭವನ, ಅಂಗವಾಡಿ ಕಟ್ಟಡ, ಮಲ್ಲಿಕಾರ್ಜುನ ದೇವಸ್ಥಾನ ಬಳಿ ಶೆಡ್ ಸೇರಿ ಸುಮಾರು 1 ಕೋಟಿ ರೂ. ಹೆಚ್ಚು ಅನುದಾನದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗುಣಮಟ್ಟದೊಂದಿಗೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಗೀತಾ, ಮುಖಂಡರಾದ ಚನ್ನಬಸಪ್ಪ, ಸೊಪ್ಪಣ್ಣ, ಶ್ರೀನಿವಾಸ ಪತ್ತಾರ್, ವೀರಶೆಟ್ಟಿ ಭದ್ರಪ್ಪನವರ್, ಮಾಣಿಕಪ್ಪ ಖಾಶೆಂಪುರ, ಡಾ.ರವಿ ಸ್ವಾಮಿ, ವೀರಯ್ಯ ಸ್ವಾಮಿ, ಶಿವಕುಮಾರ ಮೈಲೂರು, ವೀರಶೆಟ್ಟಿ ನಾಗವಾರ್, ಜಗನ್ನಾಥ ಮಜಗೆ, ಸುರೇಶ ಮಾಶೆಟ್ಟಿ, ಘಾಳೆಪ್ಪ ಚಟ್ನಳ್ಳಿ, ಶರಣಪ್ಪ ಖಾಶೆಂಪುರ, ವೀರಬಸಪ್ಪ ಬಿರಾದಾರ್, ಜಗನ್ನಾಥ, ಭೀಮರಾವ, ರಮೇಶ, ಹಮೀದ್, ಶರಣಕುಮಾರ, ಶೇಖರ ಪಾಟೀಲ್, ರಾಜು ಪಸಾರ, ಸಂತೋಷ ಹಳ್ಳಿಖೇಡ್, ಗುರು ಮಠ, ಷಣ್ಮುಕಪ್ಪ, ಸೂರ್ಯಕಾಂತ, ಮಂಜು ಸ್ವಾಮಿ, ಅಪ್ಪು ಸ್ವಾಮಿ, ಮಂಜುನಾಥ ಬಿಜಾಪುರ, ದಿಲೀಪ್ ಪಸಾರ, ರವಿ ಪಾಂಚಾಳ, ಸುಧಾಕರ ಧನ್ನೂ, ಗುರು ಚಿದ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net