ಕುರಿಗಾಹಿಗಳ ಹಿತರಕ್ಷಣೆಗೆ ಸಂತಸ

Santosh Joldapke
Published on

ಬೀದರ್: ರಾಜ್ಯ ಸರ್ಕಾರ ಸಂಚಾರಿ ಕುರಿಗಾಹಿಗಳ ಹಿತರಕ್ಷಣೆಗೆ ಕ್ರಮ ಕೈಗೊಂಡಿರುವುದಕ್ಕೆ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಸಂಚಾರಿ ಕುರಿಗಾಹಿಗಳ ಕುರಿ ಮತ್ತು ಮೇಕೆಗಳ ಕಳ್ಳತನ ತಡೆಗೆ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಂಚಾರಿ ಕುರಿಗಾಹಿಗಳಿಗೆ ಸರ್ಕಾರದಿಂದ ಗುರುತಿನ ಚೀಟಿ, ಬಂದೂಕು ಲೈಸೆನ್ಸ್ ಒದಗಿಸಬೇಕು. ಸಂಚಾರಿ ಕುರಿಗಾಹಿಗಳ ಅರಣ್ಯ ಪ್ರದೇಶದ ಹಾಗೂ ಹೊಲ ಗದ್ದೆಗಳ ಟೆಂಟ್‍ಗೆ ಪಶು ವೈದ್ಯರು ಭೇಟಿ ನೀಡಿ ಲಸಿಕೆ ಹಾಕಬೇಕು ಎಂದು ಸರ್ಕಾರ ಆದೇಶಿಸಿರುವುದು ಕುರಿಗಾಹಿಗಳಲ್ಲಿ ಹರ್ಷ ಮೂಡಿಸಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net