ಶೈಕ್ಷಣಿಕ ವಿಕಾಸಕ್ಕೆ ವಿದ್ಯಾರ್ಥಿ ಮಿತ್ರ ಸಹಕಾರಿ

Kandgul
Published on

ಔರಾದ್: ಮಕ್ಕಳ ಶೈಕ್ಷಣಿಕ ವಿಕಾಸಕ್ಕೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಸಂಚಿಕೆ ಅತ್ಯಂತ ಉಪಕಾರಿಯಾಗಿದೆ ಎಂದು ಶಿಕ್ಷಣ ಸಂಯೋಜಕ ಸಂಜೀವ ಮೇತ್ರೆ ಹೇಳಿದರು.
ಕಂದಗೂಳದ ಬಾಬು ಜಗಜೀವನರಾಂ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಮಿತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಸ್ಎಸ್ಎಲ್ಸಿ, ಪಿಯುಸಿ, ನೀಟ್, ಸಿಇಟಿ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿ ಮತ್ತು ಅಭ್ಯರ್ಥಿಗಳಿಗೆ ಈ ಸಂಚಿಕೆ ಸಹಕಾರಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ.ಶಾಲಿವಾನ್ ಉದಗೀರೆ ಮಾತನಾಡಿ, ವಿದ್ಯಾರ್ಥಿ ಮಿತ್ರ ಪತ್ರಿಕೆಯು ವಿವಿಧ ತರಗತಿ ಪಠ್ಯಕ್ರಮದೊಂದಿಗೆ ಪ್ರಚಲಿತ ವಿದ್ಯಮಾನ, ಸ್ಪರ್ಧಾತ್ಮಕ ಪರೀಕ್ಷೆಗಳ ವಿವರ ಸೇರಿ ಭವಿಷ್ಯದಲ್ಲಿ ಉನ್ನತ ಶಿಕ್ಷಣ, ಹುದ್ದೆ ಅಲಂಕರಿಸಲು ಸಹಾಯವಾಗುವ ಅಂಶಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ನಿತ್ಯವೂ ಓದುವ ಜತೆಗೆ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಶಿಕ್ಷಣದೊಂದಿಗೆ ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಇದು ಪೂರಕವಾಗಿದೆ ಎಂದು ಹೇಳಿದರು.
ಜಂಬಗಿ ವಲಯ ಸಿಆರ್ಪಿ ಅಶೋಕ ಪಾಟೀಲ್ ಮಾತನಾಡಿ, ಗ್ರಾಮೀಣ ಮಕ್ಕಳ ಶಿಕ್ಷಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಡಾ.ವಿಜಯ ಸಂಕೇಶ್ವರ ಅವರು ಕೇವಲ ಒಂದು ರೂಪಾಯಿಗೆ ಈ ಸಂಚಿಕೆ ನೀಡುತ್ತಿರುವುದು ಶ್ಲಾಘನೀಯ. ಮಕ್ಕಳು ನಿತ್ಯ ಅಧ್ಯಯನ ಮಾಡಿ ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯಗುರು ಮೊಯಿಜೊದ್ದೀನ್, ಬಿಆರ್ಪಿ ನಯೂಮ್, ವಡಗಾಂವ ಸಿಆರ್. ಪಿ ರವೀಂದ್ರ ಡಿಗ್ಗಿ, ಪ್ರಸಾರಾಂಗ ಪ್ರತಿನಿ ಸಚ್ಚಿದಾನಂದ ಸ್ವಾಮಿ, ಮಲ್ಲಪ್ಪ ಗೌಡ, ಬಸವರಾಜ ಹಡಪದ, ಅನೀತಾ, ಬಂಡೆಪ್ಪ, ನಾಮದೇವ, ಸುರೇಶ ಇತರರಿದ್ದರು. ಶಿಕ್ಷಕಿ ಸಂಗೀತಾ ಸ್ವಾಗತಿಸಿದರು. ಗಣಪತಿ ನಿರೂಪಣೆ ಮಾಡಿದರು. ಪ್ರಕಾಶ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net