ಹಡಪದ ಅಪ್ಪಣ್ಣ ಜಯಂತಿ 21ರಂದು

filter: 0; jpegRotation: 180; fileterIntensity: 0.000000; filterMask: 0;
filter: 0; jpegRotation: 180; fileterIntensity: 0.000000; filterMask: 0;
Published on

ಬೀದರ್: ಹಡಪದ ಅಪ್ಪಣ್ಣ ಜಯಂತ್ಯುತ್ಸವ ಜು.21ರಂದು ಅದ್ದೂರಿಯಾಗಿ ಮಾಡೋಣ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.
ಹಡಪದ ಅಪ್ಪಣ್ಣ ಜಯಂತಿ ನಿಮಿತ್ತ ಡಿಸಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿದ ಅವರು, ಅಂದು ಬೆಳಗ್ಗೆ 10ಕ್ಕೆ ಡಿಸಿ ಕಚೇರಿಯಲ್ಲಿ ಅಪ್ಪಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ 11ಕ್ಕೆ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವೇದಿಕೆ ಸಮಾರಂಭ ಅಚ್ಚುಕಟ್ಟಾಗಿ ಆಯೋಜಿಸಬೇಕು. ನಗರಸಭೆಯಿಂದ ಹಡಪದ ಅಪ್ಪಣ್ಣ ಪುತ್ಥಳಿಗೆ ಲೈಟಿಂಗ್ ಹಾಗೂ ಬಣ್ಣ ಹಚ್ಚುವ ವ್ಯವಸ್ಥೆ ಮಾಡಬೇಕು. ಎಲ್ಲ ಇಲಾಖೆ ಕಚೇರಿಗಳಲ್ಲಿ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಬೇಕು ಎಂದು ಸೂಚಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್ ಮಾತನಾಡಿ, ಜಯಂತ್ಯುತ್ಸವ ದಿನ ಯಾವುದೇ ತೊಂದರೆ ಆಗದಂತೆ ಸೂಕ್ತ ಪೊಲೀಸ್ ವ್ಯವಸ್ಥೆ ಮಾಡಲಾಗುವುದು. ಮಹನೀಯರ ಜಯಂತಿ ಎಲ್ಲರೂ ಸೇರಿ ಶಾಂತಿಯುತವಾಗಿ ಆಚರಿಸಬೇಕು ಎಂದರು.
ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸಂಘದ ಅಧ್ಯಕ್ಷ ಪ್ರಭುರಾವ ತರನಳ್ಳಿ ಮಾತನಾಡಿ, ಜು.21 ಭಾನುವಾರ ಬರುತ್ತಿರುವುದರಿಂದ ಅಂದು ನಮ್ಮ ಸಮಾಜದ ಜನರಿಗೆ ಹೆಚ್ಚಿನ ಕೆಲಸಗಳು ಇರುತ್ತವೆ. ಹೀಗಾಗಿ ಮೆರವಣಿಗೆ ಮಾಡುವುದು ಬೇಡ. ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಅದ್ದೂರಿಯಾಗಿ ಆಯೋಜಿಸಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ಸಿದ್ರಾಮ ಸಿಂಧೆ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಅಧ್ಯಕ್ಷ ವಿಜಯಕುಮಾರ ಸೋನಾರೆ, ಅಬಕಾರಿ ಅಧಿಕಾರಿ ಬಿ.ಶರಣಮ್ಮ, ಪ್ರಮುಖರಾದ ಸಂಗಮೇಶ ವಣಕೂರ, ಗಣೇಶ ಹಡಪದ, ವಿರೂಪಾಕ್ಷ ಗಾದಗಿ, ಶಿವಪ್ರಸಾದ, ಸಂಗೀತಾ ಬಿರಾದಾರ್, ಸಂಗಪ್ಪ ಕಾಂಬ್ಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net