ವಿದ್ಯುತ್ ನಿಗಮ ನೌಕರ ಸಂಘದ ಪದಾಧಿಕಾರಿಗಳ ಭವ್ಯ ಮೆರವಣಿಗೆ

9bk2
Published on

ಬಸವಕಲ್ಯಾಣ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ-659 ಜೆಸ್ಕಾಂ ವಿಭಾಗದ ವಿವಿಧ ಹುದ್ದೆಗಳಿಗೆ ನೇಮಕಗೊಂಡ ಮೂವರನ್ನು ಭವ್ಯ ಮೆರವಣಿಗೆ ಮೂಲಕ ಅಭಿನಂದಿಸಲಾಯಿತು.
ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಸೂರ್ಯಕಾಂತ ಬಾಳೋಸ್ಕರ್, ಸಂಘದ ಜೆಸ್ಕಾಂ ಕಂಪನಿ ವಿಭಾಗದ ಉಪ ಕಾರ್ಯದರ್ಶಿ ವೀರಣ್ಣ ಮುದ್ನಾಳೆ ಹಾಗೂ ಬೀದರ್ ವೃತ್ತದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡ ಭರತ ಭೂಷಣ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ನಡೆಸಲಾಯಿತು.
ತ್ರಿಪುರಾಂತದ ಹನುಮಾನ ಮಂದಿರದಿಂದ ಶುರುವಾದ ಮೆರವಣಿಗೆ ಮತ್ತು ಬೈಕ್ ರ್ಯಾಲಿ ಮುಖ್ಯ ರಸ್ತೆ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದವರೆಗೆ ನಡೆಯಿತು. ಗಾಂಧಿ ವೃತ್ತದಿಂದ ಬಸವಕಲ್ಯಾಣ ಉಪ ವಿಭಾಗದ ಕಚೇರಿವರೆಗೆ ಕಾಲ್ನಡಿಗೆ ಮೂಲಕ ಮೆರವಣಿಗೆ ಜರುಗಿತು.
ನಂತರ ಕಚೇರಿ ಆವರಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಜೆಸ್ಕಾಂ ಎಇಇ ಗಣಪತಿ ಮೈನಾಳೆ, ಪ್ರಾಥಮಿಕ ಸಮಿತಿ ಉಪಾಧ್ಯಕ್ಷ ಅನೀಲಕುಮಾರ ಬಿ.ದೇವನಾಳೆ, ಖಜಾಂಚಿ ಬಸವರಾಜ ಯಾಚೆ, ಸದಸ್ಯ ದಿಲೀಪ ಹೇಡೆ, ಶಾಂತವೀರ ಹಲಶೆಟ್ಟಿ, ಪ್ರಮುಖರಾದ ರಾಕೇಶ್ ವಿ.ಪುರವಂತ, ಬೂದಯ್ಯ ಮಠಪತಿ, ತಾಜೊದ್ದೀನ್ ಪಟೇಲ್, ಪ್ರಭು, ಜಬ್ಬಾರ್ ಇತರರಿದ್ದರು. ರಾಜಕುಮಾರ ರಟಕಲೆ ಸ್ವಾಗತಿಸಿದರು. ಗೌರಿಶಂಕರ ಕಳ್ಳಿಮಠ ನಿರೂಪಣೆ ಮಾಡಿದರು. ಮಲ್ಲಿಕಾರ್ಜುನ ಸಕ್ಕರಬಾವಿ ವಂದಿಸಿದರು. ಸಂಘದ ಬಸವಕಲ್ಯಾಣ ಪ್ರಾಥಮಿಕ ಸಮಿತಿ ಕಾರ್ಯಕ್ರಮ ಸಂಘಟಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net