ಹೊಟೇಲ್ ಉದ್ಯಮಿ ಗುರುಮೂರ್ತಿ ಇನ್ನಿಲ್ಲ

K. guru moorthy - Copy
Published on

ಬೀದರ್: ಇಲ್ಲಿಯ ಖ್ಯಾತ ಹೊಟೇಲ್ ಉದ್ಯಮಿ ಕೆ. ಗುರುಮೂರ್ತಿ (61) ಮಂಗಳವಾರ ನಿಧನ ಹೊಂದಿದರು.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗುರುಮೂರ್ತಿ ಅವರು ಮಂಗಳವಾರ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೂಲತಃ ಉಡುಪಿ ಜಿಲ್ಲೆಯ ಕಬ್ಬಿನಾಲೆ ಗ್ರಾಮದವರಾಗಿದ್ದ ಅವರು ನಗರದ ಬ್ರಹ್ಮಪುರ ಕಾಲೊನಿಯಲ್ಲಿ ನೆಲೆಸಿದ್ದರು. ಶ್ರೀ ಸಿದ್ದಿ ವಿನಾಯಕ ಉಡುಪಿ ಹೊಟೇಲ್ ಮಾಲೀಕರಾಗಿದ್ದರು. ನಾಲ್ಕು ದಶಕಗಳ ಕಾಲ ಹೊಟೇಲ್ ಉದ್ಯಮ ಮುನ್ನಡೆಸಿದ್ದರು.
ದಕ್ಷಿಣ ಕರಾವಳಿ ಕನ್ನಡ ಸಂಘದ ಸಂಸ್ಥಾಪಕರಾಗಿದ್ದರು. ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಮತ್ತು ಕಾರ್ಯಕ್ರಮಗಳ ಸಂಘಟನೆ ಮೂಲಕ ಜಿಲ್ಲೆಯ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಕಬ್ಬಿನಾಲೆಯಲ್ಲಿ ಬುಧವಾರ (ಜು. 10) ಮಧ್ಯಾಹ್ನ 1ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net