ದೇಶಕ್ಕೆ ಮುಖರ್ಜಿ ಕೊಡುಗೆ ಅಪಾರ

Mukharaji jayanti
Published on

ಬೀದರ್: ಜನಸಂಘದ ಸಂಸ್ಥಾಪಕಡಾ.ಶಾಮಾಪ್ರಸಾದ್ ಮುಖರ್ಜಿ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದು ನಗರಸಭೆ ಸದಸ್ಯರೂ ಆದ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ ಹೇಳಿದರು.
ನಗರದ ಗುಂಪಾ ರಿಂಗ್ ರೋಡ್ ನಲ್ಲಿರುವ ಕರ್ಪೂರ್ ಲೇಔಟ್ ನಲ್ಲಿನ ಉದ್ಯಾನದಲ್ಲಿ ಡಾ.ಶಾಮಾಪ್ರಸಾದ್ ಮುಖರ್ಜಿ ಜಯಂತಿಯಲ್ಲಿ ಮಾತನಾಡಿ, ಒಂದು ದೇಶದಲ್ಲಿ ಎರಡು ಸಂವಿಧಾನ ನಡೆಯಲ್ಲ ಎಂದು ಹೇಳಿ ಕಾಶ್ಮೀರದ ಸಂರಕ್ಷಣೆಗಾಗಿ ಮುಖರ್ಜಿ ಹೋರಾಟ ನಡೆಸಿದ್ದರು ಎಂದು ತಿಳಿಸಿದರು
ಬಿಜೆಪಿ ಮುಖಂಡ ನಾಗರಾಜ ಕರ್ಪೂರ್, ಪ್ರಮುಖರಾದ ರಾಜಶೇಖರ ಪಾಟೀಲ್ ಅಷ್ಟೂರ, ಸುಭಾಷ ಮಡಿವಾಳ, ಗಣೇಶ ಭೋಸ್ಲೆ, ನಿತೀನ್ ನವಲಕಲೆ, ರೋಷನ್ ವರ್ಮಾ, ನರೇಶ ಗೌಳಿ, ರವಿ ಪಾಟೀಲ್, ರವಿ ಕುಂಬಾರವಾಡ, ಶಶಿಕಾಂತ ಕರ್ಪೂರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net