ಬಸವಣ್ಣನವರ ಪಾಠಕ್ಕೆ ಆಕ್ಷೇಪ ಸಲ್ಲದು

Ganesh Biradar
Published on

ಬೀದರ್: 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿನ ಬಸವಣ್ಣನವರ ಪರಿಷ್ಕೃತ ಪಾಠದ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ರಾಷ್ಟ್ರೀಯ ಬಸವ ದಳದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಗಣೇಶ ಬಿರಾದಾರ ಹೇಳಿದ್ದಾರೆ.
ರಾಜ್ಯ ಸರ್ಕಾರ ಪರಿಷ್ಕರಿಸಿರುವ ಪಾಠ ಇತಿಹಾಸ ಆಧಾರಿತವಾಗಿದೆ. ಎಲ್ಲ ರೀತಿಯಿಂದಲೂ ಸರಿಯಾಗಿದೆ. ಅದಾಗಿಯೂ ಕೆಲವರು ವೀರಶೈವ ಪದ ಕೈಬಿಡಲಾಗಿದೆ ಎಂದು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಬೇಸರ ಹೊರ ಹಾಕಿದ್ದಾರೆ.
ರಾಜ್ಯ ಸರ್ಕಾರ ಸದ್ಯದ ಪರಿಷ್ಕೃತ ಪಾಠವನ್ನೇ ಮುಂದುವರಿಸಬೇಕು. ಪಾಠದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net