ಸಿದ್ಧಗಂಗಾ ಪೂಜ್ಯರ ಆಶೀರ್ವಾದ ಪಡೆದ ಸಂಸದ ಸಾಗರ್ ಖಂಡ್ರೆ

5blk2
Published on

ಭಾಲ್ಕಿ: ಬೀದರ್ ಸಂಸದ ಸಾಗರ್ ಖಂಡ್ರೆ ಅವರು ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಪೂಜ್ಯರ ಆಶೀರ್ವಾದ ಪಡೆದರು.
ಮೊದಲ ಬಾರಿಗೆ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿದ್ಧಗಂಗಾ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ಖಂಡ್ರೆ ಅವರು ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ದರುಶನ ಪಡೆದರು. ನಂತರ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಸನ್ಮಾನಿಸಿ ಆಶೀರ್ವಾದ ಪಡೆದರು.
ಶ್ರೀಗಳು ಖಂಡ್ರೆ ಅವರನ್ನು ಆಶೀರ್ವದಿಸಿ ಕಿರಿಯ ವಯಸ್ಸಿನ ಸಂಸದರೆಂಬ ಹೆಗ್ಗಳಿಕೆ ಹೊಂದಿದ್ದು, ಮೊದಲ ಪ್ರಯತ್ನದಲ್ಲೇ ಬೀದರ್ ಸಂಸದರಾಗಿ ಆಯ್ಕೆ ಆಗಿದ್ದು ಸಂತಸ ತಂದಿದೆ. ಸಂಸತ್ ಕಲಾಪದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಉತ್ತಮ ಸಂಸದೀಯ ಪಟುವಾಗಿ ಕಾರ್ಯನಿರ್ವಹಿಸಿ ಗೆಲ್ಲಿಸಿದ ಕ್ಷೇತ್ರದ ಜನತೆಗೆ ಕೀರ್ತಿ ತಂದುಕೊಡಬೇಕು ಎಂದು ಪೂಜ್ಯರು ಸಲಹೆ ನೀಡಿದರು.
ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ ಮತ್ತು ಹಿತೈಷಿಗಳ ಸಂಘದ ಬೀದರ್ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ್ ತೇಗಂಪುರ, ಪ್ರಮುಖರಾದ ರವೀಂದ್ರ ಚಿಡಗುಪ್ಪೆ, ಬಾಪುರಾವ ದೇಶಮುಖ, ಜಗನ್ನಾಥ ಕರಂಜೆ, ರಾಜಕುಮಾರ ನಾಯ್ಕೋಡೆ, ಪವನ್ ಬಿರಾದಾರ್, ಸುದರ್ಶನ ಬಿರಾದಾರ್, ಸತೀಶ್ ದೇಶಮುಖ, ಟಿಂಕು ರಾಜಭವನ, ಬಸವರಾಜ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net