

ಔರಾದ್: ಮನುಕುಲದ ಕಲ್ಯಾಣ ಮತ್ತು ಏಳಿಗೆಗೆ ಸ್ವಾಮಿ ವಿವೇಕಾನಂದರು ಜೀವನವನ್ನು ಮುಡಿಪಾಗಿಟ್ಟದ್ದರು. ಅವರ ಚಿಂತನೆ, ಆಲೋಚನೆ ಮತ್ತು ಪ್ರಯತ್ನಗಳು ದೇಶದ ಅಭಿವೃದ್ಧಿಗೆ ನೆರವಾಗಿವೆ ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹೇಳಿದರು.
ಸಂತಪುರದ ಶ್ರೀ ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಸಂಸ್ಕೃತಿಯನ್ನು ಪ್ರಪಂಚಕ್ಕೆ ಪರಿಚಯಿಸಿದ್ದೇ ವಿವೇಕಾನಂದರು ಎಂದರು.
ಉಪನ್ಯಾಸಕಿ ಅಶ್ವಿನಿ ಹಿಂದೊಡ್ಡಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಸ್ವಾಮಿ ವಿವೇಕಾನಂದರ ವೈಚಾರಿಕ ನಿಲುವು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಉಪನ್ಯಾಸಕರಾದ ಸುಧಾ ಕೌಟಿಗೆ, ಮೀರಾತಾಯಿ ಕಾಂಬ್ಳೆ ಮಾತನಾಡಿ, ಯುವ ವಿದ್ಯಾರ್ಥಿಗಳಿಗೆ ವಿವೇಕಾನಂದರ ವಿಚಾರಗಳು ಸ್ಫೂರ್ತಿ. ನವ ಭಾರತ ನಿರ್ಮಾಣದಲ್ಲಿ ಅವರ ಪಾತ್ರ ಹಿರಿದಾಗಿದೆ ಎಂದರು.
ಉಪನ್ಯಾಸಕರಾದ ಶಿವಪುತ್ರ ಧರಣಿ, ಪ್ರಿಯಾಂಕಾ ಗೊನ್ನಳ್ಳಿಕರ್, ವನದೇವಿ ಎಕ್ಕಳೆ, ಸಂತೋಷ ಧೋಳಗಂಡೆ, ಸುಧೀರ ಆಲೂರೆ, ಜಿತೇಂದ್ರ ಡಿಗ್ಗಿ ಇದ್ದರು.