ವಿದ್ಯಾನಗರ ಚರ್ಚ್ ಬೆಳ್ಳಿ ಮಹೋತ್ಸವ

Vidyanagar
Published on

ಬೀದರ್: ವಿದ್ಯಾನಗರ ಬಡಾವಣೆಯ ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್ ನ ಬೆಳ್ಳಿ ಮಹೋತ್ಸವ ಶನಿವಾರ ಹಾಗೂ ಭಾನುವಾರ ನಡೆಯಲಿದೆ.
ದೈವ ಸಂದೇಶ, ಸಾಂಸ್ಕೃತಿಕ, ಮೆರವಣಿಗೆ ಸೇರಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಾನುವಾರ ಸಂಜೆ 4ಕ್ಕೆ ಮೈಲೂರು ಕ್ರಾಸ್ ನಿಂದ ವಿದ್ಯಾನಗರ ಚರ್ಚ್ ವರೆಗೆ ನಡೆಯುವ ಭವ್ಯ ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಪಾಲ್ಗೊಳ್ಳಲಿವೆ.
ಮೆರವಣಿಗೆ ನಂತರ ಜರುಗುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬಿಷಪ್ ಎನ್.ಎಲ್. ಕರ್ಕರೆ ದೈವ ಸಂದೇಶ ನೀಡುವರು. ಕಮಲ ಕರಕರೆ, ಜಿಲ್ಲಾ ಮೆಥೋಡಿಸ್ಟ್ ಚರ್ಚ್ ಡಿಎಸ್ ರೆ.ನೆಲ್ಸನ್ ಸುಮಿತ್ರ, ಸೈಮನ್ ಮಾಕ್೯, ಎಸ್.ಎಲ್. ತುಕಾರಾಮ, ಮಾರ್ಟಿನ್ ಅಭಿಷೇಕ, ಇಮಾನ್ವೆಲ್ ಪ್ರದೀಪಕುಮಾರ, ಜಾನ್ ರುಫ್ಸು ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಚರ್ಚ್ ಸಭಾ ಪಾಲಕರಾದ ನಿರ್ಮಲಾ ಸೈಮನ್ ಮಾಕ್೯ ತಿಳಿಸಿದ್ದಾರೆ.
ವಿದ್ಯಾನಗರ ಬಡಾವಣೆಯಲ್ಲಿ ಚರ್ಚ್ ಸ್ಥಾಪನೆಯಾಗಿ 25 ವರ್ಷವಾಗಿದ್ದರಿಂದ ಬೆಳ್ಳಿ ಮಹೋತ್ಸವವನ್ನು ಅರ್ಥಪೂರ್ಣ ಜತೆಗೆ ಅದ್ದೂರಿಯಾಗಿ ಆಯೋಜಿಸಲಾಗಿದೆ. ಎರಡು ದಿನ ವಿವಿಧ ಕಾರ್ಯಕ್ರಮಗಳಿದ್ದು, ಸಮುದಾಯದವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net