

ಬೀದರ್: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಭಾಲ್ಕಿ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಉತ್ತಮಕುಮಾರ ಬಿ. ಕುಂದೆ (ಅಧ್ಯಕ್ಷ), ವೆಂಕಟ ಪಿ. ಮೋರೆ (ಉಪಾಧ್ಯಕ್ಷ), ಅಮರ ಆರ್. ಕಟ್ಟಿಮನಿ (ಪ್ರಧಾನ ಕಾರ್ಯದರ್ಶಿ), ರಾಜಕುಮಾರ ಲಾಮಲೆ, ಅಂಬಾದಾಸ ಎಸ್. ಕುಂದೆ (ಸಂಘಟನಾ ಕಾರ್ಯದರ್ಶಿ) ಅವರನ್ನು ನೇಮಕ ಮಾಡಲಾಗಿದೆ ಎಂದು ಸಮಿತಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಮಿಠಾರೆ ತಿಳಿಸಿದ್ದಾರೆ.