ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ 200 ಕೋಟಿ ಮೀಸಲು

IMG-20240703-WA0003
Published on

ಬೀದರ್: ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ 200 ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಹೇಳಿದರು.
ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಮೀಸಲಿಟ್ಟಿದ್ದ ಈ ಅನುದಾನದಲ್ಲಿ ಈಗಾಗಲೆ 80 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನಿಗಮಕ್ಕೆ ಅಧ್ಯಕ್ಷ ಮತ್ತು ನಿರ್ದೇಶಕರ ನೇಮಕವಾದ ಬಳಿಕ ಅನುದಾನ ಖರ್ಚಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಮಶಾನ ಭೂಮಿ, ಶ್ರಮಶಕ್ತಿ, ಶಿಕ್ಷಣ, ಗಂಗಾ ಕಲ್ಯಾಣ, ತರಬೇತಿ ಮುಂತಾದವುಗಳಿಗೆ ಅನುದಾನ ಬಳಸಲಾಗುವುದು. ಎಂಬಿಎ ಮತ್ತು ಎಂಸಿಎ ವಿದ್ಯಾರ್ಥಿಗಳಿಗೆ ಐದು ವರ್ಷ ಶುಲ್ಕ ಭರಿಸಲು ನೆರವು, ನನ್ನಿಂದ ಓದಲು ಆಗುತ್ತಿಲ್ಲ ಎಂದು ಯಾರಾದರೂ ನೋವು ತೋಡಿಕೊಂಡರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರಿಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಇತರ ಅಭಿವೃದ್ದಿ ಕೆಲಸದ ಹಣವನ್ನು ಗ್ಯಾರಂಟಿಗೆ ಬಳಸಲಾಗುತ್ತಿದೆ ಎಂಬುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆ ಪ್ರತಿಪಕ್ಷ ಆರ್.ಅಶೋಕ್ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು..
ಪ್ರಮುಖರಾದ ಜಾನ್ ವೆಸ್ಲಿ, ಸಂಜಯ್ ಜಾಗೀರದಾರ್, ವನಿಲಾ ಸೂರ್ಯವಂಶಿ, ಅಮೃತರಾವ ಚಿಮಕೋಡೆ, ಜಾಜ್೯ ಫರ್ನಾಂಡೀಸ್, ಅರ್ಜುನ ಕನಕ, ಎಸ್.ಪಿ. ರಾಜಶೇಖರ, ಮಹೇಶ ಹಿರೇಮನಿ, ಯೇಸುದಾಸ ಆಣದೂರೆ, ಫಿಲಿಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net