

ಬೀದರ್: ರೋಗಿಗಳ ಪ್ರಾಣ ಉಳಿಸಲು ವೈದ್ಯರು ನಡೆಸುವ ಪ್ರಯತ್ನಕ್ಕೆ ಬೇರಾವುದು ಸರಿಸಾಟಿಯಿಲ್ಲ. ಈ ಕಾರಣಕ್ಕೆ ಕಣ್ಣಿಗೆ ಕಾಣುವ ದೇವರು ವೈದ್ಯರು ಎನ್ನುತ್ತೇವೆ ಎಂದು ಡಾ.ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ ನಿರ್ದೇಶಕ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.
ನಗರದ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿ, ಆರೋಗ್ಯ ಕ್ಷೇತ್ರ ಅತ್ಯಂತ ಮಹತ್ವದ್ದು. ಒಟ್ಟಾರೆ ದೇಶದ ಅಭಿವೃದ್ಧಿಯಲ್ಲಿ ಈ ಕ್ಷೇತ್ರದ ಕೊಡುಗೆ ಹೆಚ್ಚಿದೆ. ಆರೋಗ್ಯ ಉತ್ತಮವಾಗಿದ್ದರಷ್ಟೇ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಈ ಹಿನ್ನೆಲೆಯಲ್ಲಿ ವೈದ್ಯರ ಪಾತ್ರ ಹಿರಿದಾಗಿದೆ ಎಂದರು.
ಡಾ.ವೈಜನಾಥ ತೂಗಾಂವೆ, ಡಾ.ಬಿ.ಎಸ್. ಪ್ರಭಾ, ಡಾ.ತೇಜಸ್ವಿನಿ, ಡಾ.ಭಾಗ್ಯಶ್ರೀ, ಡಾ.ಸುಷ್ಮಾ, ಆಸ್ಪತ್ರೆ ಸಿಇಒ ಕೃಷ್ಣಾರಡ್ಡಿ ಇತರರಿದ್ದರು. ಆಸ್ಪತ್ರೆ ವೈದ್ಯರು, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.