

ಬೀದರ್: ತಾಲೂಕಿನ ಚಿಕ್ಕಪೇಟ್ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ-ಪಂಗಡಗಳ 500 ಜೋಡಿಗಳ ಸರಳ ಸಾಮೂಹಿಕ ವಿವಾಹ ನಡೆಯಿತು.
ಸಾನ್ನಿಧ್ಯ ವಹಿಸಿದ್ದ ಆಣದೂರಿನ ವೈಶಾಲಿನಗರದ ಭಂತೆ ಧಮ್ಮಾನಂದ ಮಹಾಥೇರೋ ಮದುವೆ ವಿಧಿ -ವಿಧಾನಗಳನ್ನು ನಡೆಸಿಕೊಟ್ಟರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳಿಗೆ ಶುಭ ಕೋರಿ ಮಾತನಾಡಿದ ಪೌರಾಡಳಿತ ಸಚಿವ ರಹೀಮ್ಖಾನ್, ಬರುವ ದಿನ ಎಲ್ಲ ದಂಪತಿಗಳು ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕು, ಕಷ್ಟ-ಸುಖ ಏನೇ ಎದುರಾದರೂ ಹೊಂದಿಕೊಂಡು ಜೀವನ ಸಾಗಿಸಬೇಕು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಘಟಕದ ಅಧ್ಯಕ್ಷ ಅಮೃತರಾವ ಚಿಮಕೋಡೆ ಮಾತನಾಡಿ, ಸಾಮೂಹಿಕವಾಗಿ ಕಾರ್ಯಕ್ರಮ ಆಯೋಜಿಸಿ ಮದುವೆಗೆ ಆಗುವ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದ್ದು ಮಾದರಿ ಕಾರ್ಯ ಎಂದು ತಿಳಿಸಿದರು.
ಮುಖಂಡ ಶ್ರೀಪತರಾವ ದೀನೆ ಮಾತನಾಡಿದರು. ಕಾರ್ಯಕ್ರಮ ಆಯೋಜಕ ಅವಿನಾಶ ದೀನೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸಿಂಧು ಎಚ್.ಎಸ್., ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವು ಮಾನಪ್ಪ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಪ್ರಮುಖರಾದ ಅನೀಲ ಗಂಜಕರ್, ವೈಜಿನಾಥ ಕಾಂಬ್ಳೆ, ಖಲೀಲ್ ಮಿಯಾ, ಅನೀಲ ಮೇಲ್ದೊಡ್ಡಿ, ಸುಭಾಷ ನಾಗೂರೆ, ಸತೀಶ ಸಂಗನ್, ದಿಲೀಪ ಯನಗುಂದೆ, ಉಮೇಶ ಜಾಬಾ, ಗೋರಖನಾಥ ವಾಘಮಾರೆ, ಶ್ರೀಕಾಂತ ಕುಂದೆ, ಅಶೋಕ ಡೊಪ್ಪುರೆ, ವಿನೋದ ಪಾಂಚಾಳ, ಶಿವಾಜಿ ಸಾಖರೆ, ರಮೇಶ ಬಾಬು, ವಿಜಯಕುಮಾರ ಕಸ್ತೂರೆ, ದೇವೇಂದ್ರ ಕಾಂಬ್ಳೆ, ರಾಜಕುಮಾರ ಜ್ಯೋತಿ, ಶಿವರಾಜ ಸಾಗರ್ ಇತರರಿದ್ದರು. ಎನ್.ಎಂ. ಸಾಮ್ರಾಟ್ ನಿರೂಪಣೆ ಮಾಡಿದರು. ರಾಹುಲ್ ಡಾಂಗೆ ವಂದಿಸಿದರು.