ರಾತ್ರಿ ಮೃತ ಮಗು ಬೆಳಗ್ಗೆ ಪ್ರತ್ಯಕ್ಷ

manthal
Published on

ಬಸವಕಲ್ಯಾಣ: ಅನಾರೋಗ್ಯ ಕಾರಣ ರಾತ್ರಿ ಮಣ್ಣಲ್ಲಿ ಹೂತಿಟ್ಟಿದ್ದ ಮಗುವಿನ ಶವ ಬೆಳಗಾಗುವಷ್ಟರಲ್ಲಿ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಪ್ರತ್ಯಕ್ಷಗೊಂಡ ಘಟನೆ ಮಂಠಾಳ ಗ್ರಾಮದಲ್ಲಿ ನಡೆದಿದೆ.
ಮಂಠಾಳದ ಅಂಬಯ್ಯ ಸ್ವಾಮಿ ಅವರ ಒಂದೂವರೆ ವರ್ಷದ ಹೆಣ್ಣು ಮಗು ಅನಾರೋಗ್ಯದಿಂದ ಮೃತಪಟ್ಟಿತ್ತು. ತಡರಾತ್ರಿ 12ರ ಸುಮಾರಿಗೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಹೊಲದಲ್ಲಿ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದಿದ್ದಾರೆ. ಆಶ್ಚರ್ಯ ಎಂದರೆ ಹೂತಿದ್ದ ಶವ ಬೆಳಗ್ಗೆ ಮರಕ್ಕೆ ಬಟ್ಟೆಯಿಂದ ಕಟ್ಟಿದ ಜೋಕಾಲಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಪ್ರತ್ಯಕ್ಷಗೊಂಡಿದೆ. ಇದರಿಂದ ಆತಂಕಗೊಂಡ ಮನೆಯವರು ಹಾಗೂ ಸ್ಥಳೀಯರು ಮತ್ತೆ ಅದೇ ಸ್ಥಳದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಮಾಟ ಮಂತ್ರ ಮಾಡುವವರು ಮಗುವನ್ನು ಮೇಲೆ ತೆಗೆದಿರಬಹುದು ಎಂದು ಕೆಲವರು ಮಾತಾಡಿದರೆ, ಮಗುವಿನ ಶವದ ಮೇಲಿದ್ದ ಆಭರಣ ದೋಚುವ ಉದ್ದೇಶದಿಂದ ಕಿಡಿಗೆಡಿಗಳೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ಇದೆ. ಅಂತ್ಯಸಂಸ್ಕಾರ ವೇಳೆ ಶವದ ಮೇಲೆ ಬೆಳ್ಳಿ ಚೈನ್ ಇತ್ತು. ಆದರೆ ಶವ ಹೊರಗಡೆ ತೆಗೆದ ವೇಳೆ ಇರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net