14ಕ್ಕೆ ರಾಷ್ಟ್ರಮಟ್ಟದ ಉಪ್ಪಾರ ವಧು-ವರರ ಸಮಾವೇಶ

Tanaji Sagar
Published on

ಬೀದರ್: ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಹಾಗೂ ವಿಶ್ವ ಭಗೀರಥ ಟ್ರಸ್ಟ್ ವತಿಯಿಂದ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‍ನಲ್ಲಿ ಜುಲೈ 14 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರ ವರೆಗೆ ರಾಷ್ಟ್ರಮಟ್ಟದ ಉಪ್ಪಾರ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಮದುವೆ ಆಗ ಬಯಸುವ ರಾಜ್ಯ ಹಾಗೂ ದೇಶದ ಉಪ್ಪಾರ ಸಮಾಜದ ವಧು-ವರರು ಸಮಾವೇಶದಲ್ಲಿ ಪಾಲ್ಗೊಳ್ಳಬಹುದು ಎಂದು ಬೀದರ್ ಜಿಲ್ಲಾ ಉಪ್ಪಾರ(ಸಗರ) ಸಮಾಜ ಸಂಘದ ಅಧ್ಯಕ್ಷ ತಾನಾಜಿ ಸಗರ್ ತಿಳಿಸಿದ್ದಾರೆ.
ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9449886150, 9448225046 ಅಥವಾ 9448076415 ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net