ರೋಟರಿ ಫೆಲೊಶಿಪ್ಸ್ ಮಾಸ ಕಾರ್ಯಕ್ರಮ

Rotary fellowships Month Programme - Copy
Published on

ಬೀದರ್: ಇಲ್ಲಿಯ ಇನ್‍ಸ್ಪೈರ್ ಹೊಟೇಲ್‍ನಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಈಚೆಗೆ ರೋಟರಿ ಫೆಲೊಶಿಪ್ಸ್ ಮಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಪರಂಪರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಾದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಪಾರಂಪರಿಕ ತಾಣಗಳ ಸಂರಕ್ಷಣೆಯಿಂದ ಮುಂದಿನ ಪೀಳಿಗೆಗೆ ನಮ್ಮ ಗತವೈಭವ ಹಾಗೂ ಇತಿಹಾಸ ಅರಿಯಲು ಅನುಕೂಲವಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗಲಿದೆ ಎಂದು ತಿಳಿಸಿದರು.
ಅಂಬೆಸೆಟರ್ ಹೇಮಂತ್ ಕೋಟಲವಾರ್ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ರಾಘವೇಂದ್ರ ಔರಾದಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಬೀದರ್ ಉಪ ವಿಭಾಗಾಧಿಕಾರಿ ಲವೀಶ್ ಓರ್ಡಿಯಾ, ಕ್ಲಬ್ ಅಧ್ಯಕ್ಷ ಕಪಿಲ್ ಪಾಟೀಲ, ಕಾರ್ಯದರ್ಶಿ ಶಿವಕುಮಾರ ಪಾಖಾಲ್, ಡಾ. ರಘು ಕೃಷ್ಣಮೂರ್ತಿ, ಪ್ರಮುಖರಾದ ಬಸವರಾಜ ಸಿಂದೋಲ್, ಬಿ.ಜಿ. ಶೆಟಕಾರ್, ಡಾ. ರಿತೇಶ ಸುಲೆಗಾಂವ್ ಮೊದಲಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net