ಎನ್ನೆಸ್ಸೆಸ್ ಶಿಬಿರದಿಂದ ಸೇವಾ ಮನೋಭಾವ

oplus_2
oplus_2
Published on

ಚಿಟಗುಪ್ಪ: ವಿದ್ಯಾರ್ಥಿಗಳು ಎನ್ನೆಸ್ಸೆಸ್ ಶಿಬಿರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಜೀವನದಲ್ಲಿ ಶಿಸ್ತು ಮತ್ತು ಸೇವಾ ಮನೋಭಾವ ಮೈಗೂಡಿಸಿಕೊಳ್ಳಲು ಸಾಧ್ಯ ಎಂದು ಸಾಹಿತಿ ಡಾ.ಜಯದೇವಿ ಗಾಯಕವಾಡ ಹೇಳಿದರು.
ಬೀದರ್ ವಿಶ್ವವಿದ್ಯಾಲಯ ಸಹಯೋಗದಡಿ ಪಟ್ಟಣದ ಸಕರ್ಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ವಾರ್ಷಿಕ ವಿಶೇಷ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಪಾತ್ರ ಮಹತ್ವದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಸುರೇಂದ್ರಸಿಂಗ್ ಮಾತನಾಡಿ, ಪ್ರಸ್ತುತ ಸ್ಪರ್ಧಾತ್ಮಕ ಯುಗ. ಹೀಗಾಗಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಿ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ಎನ್ನೆಸ್ಸೆಸ್ ಶಿಬಿರದಿಂದ ಪುಸ್ತಕ ಜ್ಞಾನ ಜತೆಗೆ ಬದುಕಿನ ಜ್ಞಾನ ಪಡೆಯಲು ಸಾಧ್ಯ. ವಿಶೇಷ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಮನೋಭಾವ ಮೂಡುತ್ತದೆ ಮತ್ತು ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.
ಎನ್ನೆಸ್ಸೆಸ್ ಅಧಿಕಾರಿ ಡಾ.ವೀರಶೆಟ್ಟಿ ಮೈಲೂರಕರ್ ವರದಿ ಮಂಡಿಸಿ, ಬೀದರ್ ವಿವಿ ಆಶ್ರಯದಲ್ಲಿ ನಡೆದ ಪ್ರಥಮ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವದಲ್ಲಿ ಯುವಕರ ಪಾತ್ರ ಸಂದೇಶದೊಂದಿಗೆ ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಅನೀಲಕುಮಾರ ಸಿಂಧೆ, ಶಿಬಿರಾರ್ಥಿಗಳಾದ ಐಶ್ವರ್ಯ, ರಕ್ಷಿತಾ ಮಾತನಾಡಿದರು. ಹಿರಿಯ ಪ್ರಾಧ್ಯಾಪಕರಾದ ಡಾ.ಕೆ. ಶಿವಕುಮಾರ, ಡಾ.ಶಿವಕುಮಾರ ಬಿರಾದಾರ್, ಪ್ರಮುಖರಾದ ಡಾ.ರವೀಂದ್ರಕುಮಾರ ಟಿಳೇಕರ್, ಮೀನಾಕ್ಷಿ, ಡಾ.ಸಯೀದಾ ಬಾನು, ಡಾ.ಶೇಷರಾವ, ರಮೇಶಕುಮಾರ ಬಿರಾದಾರ್, ಶಾಂತಕುಮಾರ ಪಾಟೀಲ್, ಡಾ.ಚಂದ್ರಕಾಂತ, ಶಂಕ್ರೆಪ್ಪ ಇತರರಿದ್ದರು.
ಒಂದು ವಾರದ ಶಿಬಿರದಲ್ಲಿ 100 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶ್ರಮದಾನ, ಸಂಪನ್ಮೂಲ ತಜ್ಞರಿಂದ ವಿಶೇಷ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ಸಾಮಾಜಿಕ ಜಾಗೃತಿ ಮೂಡಿಸುವ ರೂಪಕಗಳು, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಬಸ್ ನಿಲ್ದಾಣದಲ್ಲಿ ಶುಚಿಗೊಳಿಸುವ ಅಭಿಯಾನ, ಮನರಂಜನೆ, ಸಸಿ ನೆಡುವ ಸೇರಿ ಹಲವು ಅರ್ಥಪೂರ್ಣ ಚಟುವಟಿಕೆ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net