ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

Manikrao Patil Rural Polytechnic College 26-6-2024
Published on

ಬೀದರ್: ಡಿಪ್ಲೊಮಾ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಕಮಲನಗರ ತಾಲ್ಲೂಕಿನ ಠಾಣಾಕುಶನೂರದ ಮಾಣಿಕರಾವ್ ಪಾಟೀಲ ರೂರಲ್ ಪಾಲಿಟೆಕ್ನಿಕ್‍ನಲ್ಲಿ ನಡೆಯಿತು.
ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಮಯ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಉತ್ತುಂಗದ ಸಾಧನೆಗೆ ಪ್ರಯತ್ನಿಸಬೇಕು ಎಂದು ಪ್ರಾಚಾರ್ಯ ರಾಜಶೇಖರ ಮುದ್ದಾ ಹೇಳಿದರು.
ಉಪ ಪ್ರಾಚಾರ್ಯ ದಿಲೀಪ್ ರಾಂಪುರೆ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಸಂಜಯ್ ಭೋಸ್ಲೆ ಮಾತನಾಡಿದರು.
ಉಪನ್ಯಾಸಕರಾದ ಸಂಗಮೇಶ ಆಣದೂರೆ, ಅಶೋಕ್ ಉಚ್ಚೆಕರ್, ಸುನೀಲ್ ಮಡಿವಾಳ, ಸುನೀಲಕುಮಾರ ಕರಂಜೆ, ವಿಶ್ವನಾಥ ಕಣಕುರ್ತೆ, ಸಿದ್ರಾಮಪ್ಪ ಮೂಲಿಮನಿ, ವಿಲಾಸರಾವ್ ಪಾಂಡ್ರೆ, ಜಯಶ್ರೀ ಜೀರ್ಗೆ, ಅರ್ಚನಾ ಶಿಂಧೆ, ಕುಪೇಂದ್ರ ಮೇತ್ರೆ, ಮನೋಹರ ಪಾಟೀಲ, ವಿಶ್ವನಾಥ ಶಾಸ್ತ್ರಿ ಇದ್ದರು. ಆರ್.ಬಿ. ವಾಡಕೆ ಸ್ವಾಗತಿಸಿದರು. ಸಚಿನ್ ಬಳತೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net