ಮುಚಳಂಬನಲ್ಲಿ ರೇವಪಯ್ಯ ಜಾತ್ರೆ

revapayy
Published on

ಹುಲಸೂರು: ತಾಲೂಕಿನ ಮುಂಚಳಂಬ ಗ್ರಾಮದಲ್ಲಿ ಮಂಗಳವಾರ ಶ್ರೀ ರೇವಪಯ್ಯ ಸ್ವಾಮಿ ಅವರ ಬಿನ್ನಹ (ಹೋಳಿಗೆ ತುಪ್ಪ ಜಾತ್ರೆ) ಅದ್ದೂರಿಯಾಗಿ ಜರುಗಿತು.
ರೇವಪಯ್ಯ ಸ್ವಾಮಿ ಅವರ ಗದ್ದುಗೆಗೆ ಬೆಳಗ್ಗೆ ವಿಶೇಷ ಪೂಜೆ ನಡೆಯಿತು. ಶ್ರೀ ನಾಗಭೂಷಣ ಸಂಸ್ಥಾನದ ಶ್ರೀ ಪ್ರಣವಾನಂದ ಸವಾಮೀಜಿ ಅವರು ಪ್ರವಚನ ನೀಡಿ, ರೇವಪಯ್ಯ ಸ್ವಾಮೀಜಿಗಳ ಲೀಲೆಗಳನ್ನು ಹೇಳಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಪ್ಪ ಮುರಗೆಪ್ಪ, ರಾಜಶೇಖರ ಬಿರಾದಾರ್, ಮಹಾದೇವ ಕಾಮಶೆಟ್ಟಿ, ಕಾಶಿನಾಥ ಹೊಳಕಡೆ, ಕಾಶಪ್ಪ ಕಾಶಪ್ಪನವರ್, ಭರತ ಗುರಣಾ, ಸಿದ್ರಾಮಯ್ಯ ಮಠ, ರಾಜಕುಮಾರ ಹಿರೇಮಠ, ಅಶೋಕ, ಶಾಂತಕುಮಾರ, ಭೀಮಣ್ಣ ಬಚಣೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net