ಭಾರತೀಯ ಶಿಕ್ಷಣ ಮಂಡಲ ಅಧ್ಯಕ್ಷರಾಗಿ ಮಂಗಳೂರೆ

Santosh Manglore - Copy
Published on

ಬೀದರ್: ಭಾರತೀಯ ಶಿಕ್ಷಣ ಮಂಡಲದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಇಲ್ಲಿಯ ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದ ಸರಸ್ವತಿ ವಿದ್ಯಾ ಮಂದಿರದಲ್ಲಿ ನಡೆದ ಮಂಡಲದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು: ಪುಣ್ಯವತಿ ವಿಸಾಜಿ, ಬಸವರಾಜ ಮೂಲಗೆ, ಪರಮೇಶ್ವರ ಬಿರಾದಾರ (ಉಪಾಧ್ಯಕ್ಷರು), ಪ್ರತಿಭಾ ಚಾಮಾ (ಕಾರ್ಯದರ್ಶಿ), ಸಂತೋಷ ಮೇಲಶೆಟ್ಟಿ ಹಾಗೂ ಬಸವರಾಜ ಬಶೆಟ್ಟಿ (ಸಹ ಕಾಯದರ್ಶಿಗಳು).
ನವದೆಹಲಿಯ ಎನ್.ಸಿ.ಟಿ.ಇ. ದಕ್ಷಿಣ ವಲಯ ಅಧ್ಯಕ್ಷೆ ಮೀನಾ ಚಂದಾವರಕರ್ ಅವರು ನೂತನ ಪದಾಧಿಕಾರಿಗಳ ಹೆಸರು ಘೋಷಿಸಿದರು.
ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್. ಬಿರಾದಾರ, ಭಾರತೀಯ ಶಿಕ್ಷಣ ಮಂಡಲದ ಕರ್ನಾಟಕ ಉತ್ತರ ಪ್ರಾಂತದ ಸಹ ಕಾರ್ಯದರ್ಶಿಗಳಾದ ಸಿದ್ದು ಮದಕರಂಡಿ, ಡಾ. ಪಲ್ಲವಿ ಪಾಟೀಲ, ಡಾ. ಹೇಮಂತಕುಮಾರ ಕಪ್ಪಾಳಿ, ವೀರಯ್ಯ ಮುತ್ತಿನಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net