ಕಾಂಗ್ರೆಸ್‍ಗೆ ನೇಮಕ

Tejamma Gundappa
Published on

ಬೀದರ್: ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಬೀದರ್ ನಗರ ಘಟಕದ ಅಧ್ಯಕ್ಷೆಯಾಗಿ ಶಹಾಪುರಗೇಟ್ ನಿವಾಸಿ ತೇಜಮ್ಮ ಗುಂಡಪ್ಪ ಅವರನ್ನು ನೇಮಕ ಮಾಡಲಾಗಿದೆ.
ಪೌರಾಡಳಿತ ಮತ್ತು ಹಜ್ ಸಚಿವ ರಹೀಂಖಾನ್ ಅವರ ಶಿಫಾರಸು ಹಾಗೂ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ವಿಜಯ ನಾಯಕ್ ಎಂ. ಅವರ ಒಪ್ಪಿಗೆ ಮೇರೆಗೆ ಈ ನೇಮಕ ಮಾಡಲಾಗಿದೆ ಎಂದು ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ರಾಕೇಶ ಎನ್. ಕುರುಬಖೇಳಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net